ಮಾರ್ಚ್ 13ರಂದು ದೆಹಲಿಯಲ್ಲಿ ಸಿಡಬ್ಯುಸಿ- ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆತ್ಮಾವಲೋಕನ ಸಭೆಯು ಐದು ಗಂಟೆಗಳ ಕಾಲ ನಡೆದು ಸದ್ಯ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿಯೇ ಪಕ್ಷದ ನಾಯಕತ್ವ ಉಳಿಯುವುದಾಗಿ ಪ್ರಕಟಿಸಲಾಯಿತು.
ಐದು ರಾಜ್ಯಗಳಲ್ಲಿನ ಚುನಾವಣಾ ಸೋಲು ತೀವ್ರ ಕಳವಳಕಾರಿ ಎಂದು ಪಕ್ಷದ ವಕ್ತಾರ ಸುರ್ಜೇವಾಲ ಹೇಳಿದರು. ಆಯಾ ರಾಜ್ಯಗಳ ಉಸ್ತುವಾರಿ ವಹಿಸಿದ್ದವರು ಚುನಾವಣಾ ಸೋಲಿನ ಜವಾಬುದಾರಿ ಹೊತ್ತಿರುವುದಾಗಿ ಹೇಳಿಕೆ ನೀಡಲಾಗಿದೆ. ರಾಜಸ್ತಾನ ಮುಖ್ಯಮಂತ್ರಿ ಗೆಹ್ಲೋಟ್ ಸಹಿತ ಹಲವರು ರಾಹುಲ್ ಗಾಂಧಿಯವರಿಗೆ ಪಕ್ಷದ ಅಧ್ಯಕ್ಷತೆ ನೀಡುವ ಬಗೆಗೆ ಮಾತನಾಡಿದರು. ಆದರೆ ಸದ್ಯ ಅವರೇ ಆ ಬಗೆಗೆ ಆಸಕ್ತಿ ವಹಿಸಿಲ್ಲ.