ರಾಜ್ಯದಲ್ಲಿ 287 ಸರಕಾರಿ ಶಾಲೆಗಳು ಮುಕ್ಕಳಿಲ್ಲದೆ ಮುಚ್ಚಿದರೆ 750 ಅನುದಾನ ರಹಿತ ಶಾಲೆಗಳು ಹಣಕಾಸು ತೊಂದರೆಯಿಂದ ಮುಚ್ಚಿರುವುದಾಗಿ ವಿಧಾನ ಸಭೆಯಲ್ಲಿ ತಿಳಿಸಲಾಯಿತು.

ಕೊರೋನಾ ಮತ್ತಿತರ ಕಾರಣಗಳಿಂದ 285 ಪ್ರೌಢ ಶಾಲೆ ಮತ್ತು 2 ಪ್ರಾಥಮಿಕ ಶಾಲೆಗಳಿಗೆ ಮಕ್ಕಳು ದಾಖಲು ಆಗದ ಕಾರಣ ಆ ಸರಕಾರಿ ಶಾಲೆಗಳು ಮುಚ್ಚಿವೆ. 750 ಅನುದಾನ ಇಲ್ಲದ ಶಾಲೆಗಳು ಆರ್ಥಿಕ ಹಾನಿಯಿಂದ ಬಾಗಿಲು ಹಾಕಿದ್ದಾಗಿ ಹೇಳಿವೆ.