ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮಂಗಳೂರು: ಮಂಗಳೂರಿನ ಬಹಳ ಹೆಸರುವಾಸಿ ಮಹಿಳೆಯರ ಕಾಲೇಜು ಬೆಸೆಂಟ್ ವುಮೆನ್ಸ್ ಕಾಲೇಜಿನ ಗ್ರಾಹಕ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿಗಳು ಅಕ್ಟೋಬರ್ 3 ರಂದು ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿದರು. ಬೆಸೆಂಟ್ ಕಾಲೇಜಿನ ಗ್ರಾಹಕ ಕಾರ್ಡಿನೇಟರ್ ವಿದ್ಯಾ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ನೀಲಗಿರಿ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿ ಹಲವಾರು ವಿಚಾರಗಳನ್ನು ತಿಳಿಸಿದರು. ಸೂಪರ್ ಮಾರುಕಟ್ಟೆಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಸೂಪರ್ ಮಾರುಕಟ್ಟೆ ನಡೆಯುವ ವಿಧಾನ, ರೀತಿ, ಅಲ್ಲಿಯ ಸ್ವಚ್ಛತೆ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಗ್ರಾಹಕ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಿಕೊಟ್ಟರು. ಗ್ರಾಹಕ ಕ್ಲಬ್ ವಿದ್ಯಾರ್ಥಿಗಳಿಂದ ಸೂಪರ್ ಮಾರುಕಟ್ಟೆಗೆ ಭೇಟಿ