ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಸಮಾಜ ಮಂದಿರ ಸಭಾ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಅಕ್ಟೋಬರ್ 3 ರಿಂದ 7 ರ ವರೆಗೆ ನಡೆಸುತ್ತಿದೆ. ಅಕ್ಟೋಬರ್ 3 ರಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಧರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು ಎಂ ಸಿ ಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ರಿಗೆ ಸಮಾಜ ಮಂದಿರ ಪುರಸ್ಕಾರವನ್ನು ನೀಡಲಾಗುವುದು. 

ಅಕ್ಟೋಬರ್ 4 ರಂದು ಆಗುಂಬೆ ಎಸ್ ನಟರಾಜ್ ರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಶ್ರೀಧರ ಬನವಾಸಿ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ನೀಡಲಾಗುವುದು.

ಅಕ್ಟೋಬರ್ 5 ರಂದು ನಮ್ಮ ಹೆಮ್ಮೆಯ ಅಬ್ಬಕ್ಕ ಉಪನ್ಯಾಸ ಡಾ. ತುಕಾರಾಂ ಪೂಜಾರಿ ಅವರಿಂದ, ಅಕ್ಟೋಬರ್ 6 ರಂದು ಯಕ್ಷ ರಂಗದ ಸ್ವಾರಸ್ಯ ಪ್ರಸಂಗಗಳು ಉಪನ್ಯಾಸ ಡಾ. ವಾದಿರಾಜ ಕಲ್ಲೂರಾಯ ರಿಂದ, ಅಕ್ಟೋಬರ್ 7 ರಂದು ತುಳುನಾಡಿನ ಹಬ್ಬಗಳು-ಸೌಹಾರ್ದ ಪರಂಪರೆ ಉಪನ್ಯಾಸ ತಾರಾನಾಥ ಗಟ್ಟಿ ಕಾಪಿಕಾಡ್ ರವರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.