ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಏಳು ದಿನದ ಉಚಿತ ಯೋಗ, ಧ್ಯಾನ ಮತ್ತು ಜ್ಞಾನದ ಶಿಬಿರÀ ಉದ್ಘಾಟನಾ ಸಮಾರಂಭ ದಿನಾಂಕ 18.03.2021 ರಂದು ಸಂಜೆ  ತುಳುಭವನದ ಸಿರಿಚಾವಡಿಯಲ್ಲಿ  ನಡೆಯಿತು.  

ಮುಖ್ಯ ಅತಿಥಿಯಾದ ಡಾ.ಶಿವರಾಮ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಸ್ವಾಗತ ಭಾಷಣವನ್ನು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಇದರ ಪ್ರಾಂತೀಯ  ಸಂಯೋಜಕರಾದ ಶ್ರೀ ವಸಂತ ಕುಮಾರ್ , ಮತ್ತು ಪ್ರಾರ್ಥನೆಯನ್ನು ಶ್ರೀಮತಿ ಗೀತಾ ಶಿವರಾಮ್ ಮಾಡಿದರು. ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಇದರ ತರಬೇತುದಾರರಾದ ಶ್ರೀಮತಿ ಸುರೇಖಾ ಹೆಗ್ಡೆ ಯೋಗ ಶಿಬಿರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ನಿಟ್ಟೆ ಶಶಿಧರ್ ಶೆಟ್ಟಿ, ಶ್ರೀ ಚೇತಕ್ ಪೂಜಾರಿ ಉಪಸ್ಥಿತರಿದ್ದರು.