ವಿದ್ಯಾರ್ಥಿಗಳ ಓದುವ ಆಸಕ್ತಿ ಕುಂದಿಸಿದ ಶಕ್ತಿ ಯೋಜನೆ..! – Article by Naveen Habib

ಕರ್ನಾಟಕದ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯು ನಿಸ್ಸಂದೇಹವಾಗಿ ಮಹಿಳೆಯರಿಗೆ ಪ್ರಯೋಜನವನ್ನು ನೀಡಿದೆ, ಆದರೆ ಇದು ಇತರರಿಗೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೌದು ನಿರಾಯಾಸವಾಗಿ ಪ್ರಯಾಣಿಸಲಾಗದೆ ವಿದ್ಯಾರ್ಥಿಗಳು ಈಗ ಯೋಜನೆಗೆ ಹಿಡಿಶಾಪ ಹಾಕುವ ಸ್ಥಿತಿ ಎಲ್ಲೆಡೆಯಿದೆ.

ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಸಂಚಾರದ ವೇಳೆಯಲ್ಲಿ ಬದಲಾವಣೆ, ಕೆಲವು ಮಾರ್ಗಗಳ ಸಂಚಾರ ಮೊಟಕುಗೊಳಿಸುವಂತ ಪ್ರಕ್ರಿಯೆ ನಡೆದಿದೆ. ಆದಕಾರಣ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವ ಅವಧಿಯಲ್ಲೇ ಬಸ್ ಇಲ್ಲದಿರುವುದು, ಇದ್ದರೂ ಪ್ರಯಾಣಿಕರ ದಟ್ಟಣೆಯಿಂದ ನೂಕುನುಗ್ಗಲು ಉಂಟಾಗಿ ಬಸ್ ಏರಲಾಗದ ಸ್ಥಿತಿ ಎದುರಾಗುತ್ತಿದೆ. ಇದು ವಿದ್ಯಾರ್ಥಿ ಮತ್ತು ಪಾಲಕರ ವಲಯದ ಬೇಸರಕ್ಕೆ ಕಾರಣವಾಗಿದೆ.

ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ಸಾರಿಗೆ ಬಸಗಳಿಂದ ವಿದ್ಯಾರ್ಥಿಗಳಿಗೆ ಬಾರಿ ತೊಂದರೆ ಉಂಟಾಗಿದೆ. ಬಸ್ ಫುಲ್ ರಶ್​​ ಪ್ರಯಾಣಿಸಲು ಪ್ರತಿನಿತ್ಯ ಒದ್ದಾಡ್ತಿರೋ ವಿದ್ಯಾರ್ಥಿಗಳು ಬೆಳಿಗ್ಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜ್ ಗೇ ತಲುಪಲಾಗದೆ ಹಾಗೂ ಸಂಜೆ ಶಾಲಾ ಕಾಲೇಜ್ ಯಿಂದ ಅವರ ಊರು ಮನೆಗೆ ಸೇರದೆ ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ.ಬೆಳಿಗ್ಗೆ ಶಾಲಾ ಕಾಲೇಜು ಸಮಯಕ್ಕಿಂತ ಎರಡು ಘಂಟೆ ಮೊದಲು ಹೋಗಬೇಕು ಮತ್ತು ಸಾಯಂಕಾಲ 4.30ಕ್ಕೆ ಸ್ಕೂಲ್ ಬಿಟ್ಟರೆ ಸಂಜೆ ಅವರು ಮನೆಗೆ ಹೋಗುವದು 6 7 ಘಂಟೆ ಆಗ್ತಾ ಇದೆ. ಬಸ್ ನಲ್ಲಿ ಕಿಕ್ಕಿರಿದು ಹೋಗ್ತಿರೋ ಪ್ರಯಾಣಿಕರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಶಕ್ತಿ ಯೋಜನೆ ಜಾರಿ ಬಳಿಕ ಹಲವು ವಿದ್ಯಾರ್ಥಿಗಳು ಸೀಟ್ ಮೇಲೆ ಕುಳಿತೆ ಇಲ್ಲ ಎಂದು ಹೇಳುತ್ತಿದ್ದಾರೆ. ಬಸ್ ನಿಲ್ದಾಣದಿಂದಲೇ ರಶ್ ಆಗಿ ತೆರಳುವ ಸಾರಿಗೆ ಬಸ್​ನಿಂದ ಹಲವರಿಗೆ ತೊಂದರೆಯಾಗುತ್ತಿದೆ. ಬಸ್​ನಲ್ಲಿ ಸೀಟ್ ಹಿಡಿಯಲು ನಿತ್ಯ ನೂಕು- ನುಗ್ಗಲು ಆಗುತ್ತಿತ್ತು. ನಿತ್ಯ ಬಸ್ ನಲ್ಲಿ 100 ಕ್ಕೂ ಹೆಚ್ಚು ಪ್ರಯಾಣಿಕ ಪ್ರಯಾಣ ಮಾಡುತ್ತಾರೆ. ಅಪಾಯದಲ್ಲಿಯೇ ಸಾಗುವ ಸಾರಿಗೆ ಬಸ್ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುತ್ತಿದೆ. ಬಸ್ ಹತ್ತುವ ಮೆಟ್ಟಿಲು ಮೇಲೆ ನಿಂತು ಜೋತು ಬಿದ್ದು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ಟಿಕೆಟ್ ವಿತರಣೆ ಮಾಡಲು ಹರಸಾಹಸ ಪಡ್ತಿರೋ ಬಸ್ ಕಂಡಕ್ಟರ್ ಅವರ ಸ್ಥಿತಿಯೂ ಅತ್ಯಂತ ಶೋಚನೀಯವಾಗಿದೆ. ಆದ ಕಾರಣ ಶಕ್ತಿ ಯೋಜನೆ ಪರಿಣಾಮ ಜಿಲ್ಲೆಯ ಬಹುತೇಕ ಮಾರ್ಗದ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿದಿನ ಶಾಲಾ ಕಾಲೇಜು ಸಂಚಾರಕ್ಕೆ ಪರದಾಡುವಂತಾಗಿದೆ. ಹಾಗಾಗಿ ಜನಸ್ನೇಹಿ ಸಾರಿಗೆ ಸಂಸ್ಥೆ ಮಕ್ಕಳ ಹಿತದೃಷ್ಟಿಯಿಂದ ಹೆಚ್ಚವರಿ ಬಸ್ಸುಗಳನ್ನು ಬಿಡುವ ಮೂಲಕ ಹಾಗೂ ಎಲ್ಲಾ ಮಹಿಳೆಯರು ಅನವಶ್ಯಕ ಓಡಾಟವನ್ನು ನಿಲ್ಲಿಸುವ ಮೂಲಕ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒಬ್ಬ ಶಿಕ್ಷಕನಾಗಿ ನಾನು ವಿನಮ್ರ ಮನವಿಯನ್ನು ಮಾಡುತ್ತೇನೆ.

Article by

ನವೀನ ಹಬೀಬ
ಶಿಕ್ಷಕರು ಪರ್ಲ್ ಪಬ್ಲಿಕ್ ಸ್ಕೂಲ್

Leave a Reply

Your email address will not be published. Required fields are marked *