ಸ್ಥಳೀಯ ನಾಟೇಕಲ್ಲಿನಲ್ಲಿರುವ ಕಣಚೂರ್ ವಿದ್ಯಾಸಂಸ್ಥೆಗಳ ಗಣರಾಜ್ಯ ದಿನಾಚರಣೆಯು 26 ಜನವರಿಯ ಮುಂಜಾನೆ 9ರಿಂದ ಸಂಭ್ರಮದಿಂದ ಆಚರಿಸಲ್ಪಟ್ಟಿತು.
ಸಂಸ್ಥೆಯ ಚೇರ್ಮನ್ ಡಾ ಕಣಚೂರು ಹಾಜೀ ಮೋನು, ನಿರ್ದೇಶಕ ಅಬ್ದುಲ್ ರಹಿಮಾನ ಸಹಿತ ಗಣ್ಯರು ಮೆರವಣಿಗೆಯಲ್ಲಿ ಆಗಮಿಸಿ ಮಹಾತ್ಮಾ ಗಾಂಧಿ ಸುಭಾಶ್ಚಂದ್ರ ಬೋಸರ ಭಾವಚಿತ್ರಕ್ಕೆ ಹೂಗಳನ್ನು ಹಾಕಿ ಡಾ ಮೋನುರವರಿಂದ ಧ್ವಜಾರೋಹಣ ಮಾಡಲಾಯಿತು.


ವ್ಯೆಷ್ಣವಿ ಆಚಾರ್ಯರಿಂದ ನಾಡಗೀತೆ ಆದ ನಂತರ ಅಧ್ಯಕ್ಷತೆ ವಹಿಸಿದ್ದ ಡಾ. ಮೋನು ಅವರು ದೇಶ ನನ್ನದು ದೇಶಕ್ಕಾಗಿ ನಾನು ಎಂಬ ಮನೋಭಾವ ರೂಢಿಸ ಬೇಕು.ನಮ್ಮ ಕರ್ತವ್ಯ ದೇಶಪ್ರೇಮ ಯಾವರೀತಿ ಇರಬೇಕು ಎಂದು ಹಿತವಚನ ನೀಡಿದರು.
ಡಾ ರೋಷನ್ ಮೋನಿಸ್, ಡಾ ರೋಹನ್, ಮೊಲ್ಲಿ ಸಾಲ್ದಾನ, ಇಕ್ಬಾಲ್, ರಾಜೀವ್ ಕುಮಾರ್, ಶಾಹಿದ, ಕೇರೋಲ್, ಮುಂತಾದ ಬೇರೆಬೇರೆ ಅಂಗಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಆಯುರ್ವೇದ ಕಾಲೇಜು ಪ್ರಾಚಾರ್ಯರಾದ ಡಾ ವಿದ್ಯಾ ಪ್ರಭಾ ಸ್ವಾಗತಿಸಿದರು ಮತ್ತು ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಧನ್ಯವಾದ ಸಮರ್ಪಿಸಿದರು
ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳೂ ವಿಶೇಷ ದೇಶಭಿಮಾನ ಸಾರುವ ಯೋಗ ಪ್ರಾತ್ಯಕ್ಷಿಕೆಗಳು ಮನಸೆಳೆದುವು
