ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಆಚರಣೆ

ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ  ವಾರ್ಷಿಕ ಹಬ್ಬದ ಪ್ರಯುಕ್ತ  ಪರಮ ಪ್ರಸಾದದ ಆಚರಣೆಯನ್ನು ಮೆರವಣಿಗೆಯ ಮೂಲಕ ಸಂಭ್ರಮ ಸಡಗರ ಭಕ್ತಿಯಿಂದ ಆಚರಿಸಲಾಯಿತು. ಲೊರೆಟ್ಟೊ ಚರ್ಚ್ ನಿoದ ಅಂಚೆ ಕಚೇರಿಯ ಮೂಲಕ ಲೊರೆಟ್ಟೊಪದವು ತನಕ ಪರಮ ಪ್ರಸಾದದ ಮೆರವಣಿಗೆ ಬಹಳ ಭಕ್ತಿಯಿಂದ ಬ್ಯಾಂಡ್ ವಾದ್ಯಗಳ ಮೂಲಕ ಸಂಭ್ರಮ ಸಡಗರದಿಂದ ನೆರವೇರಿತು.

ಪ್ರಧಾನ ಧರ್ಮಗುರುಗಳಾದ ಧರ್ಮ ಪ್ರಾಂತ್ಯದ ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕರಾಗಿರುವ ವಂ. ಐವನ್ ಡಿಸೋಜ ರವರು “ಶಾಂತಿ ನೀತಿ ಸ್ಥಾಪಿಸುವ ಭರವಸೆಯ ಯಾತ್ರಿಕರಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರವಚನ ನೀಡಿ ನೂರಾರು ಭಕ್ತಾದಿಗಳು ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾ ರವರು ಈ ಸಂಭ್ರಮವನ್ನು ಸಡಗರದಿಂದ ಆಚರಿಸಲು ಸಹಕರಿಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಲೊರೆಟ್ಟೊ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೇಸನ್ ಮೋನಿಸ್, ವl ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಪಾಲನಾ ಮಂಡಳಿ ಸಂಭ್ರಮದ ಮೇಲುಸ್ತುವಾರಿಯನ್ನು ವಯಿಸಿತ್ತು.

Leave a Reply

Your email address will not be published. Required fields are marked *