ನಾರಾವಿಯ ಹೊಸ್ಮಾರಿನಲ್ಲಿ ಹವಾಮಾನ ಆಧಾರಿತ ಕೃಷಿ -ರೈತ ಜಾಗೃತಿ ಕಾರ್ಯಕ್ರಮ

ವರದಿ ರಾಯಿ ರಾಜಕುಮಾರ್

ನಾರಾವಿ ಸಮೀಪದ ಹೊಸ್ಮಾರು ಬಲ್ಯೊಟ್ಟು ಪ್ರದೇಶದ ಗುರುಕೃಪಾ ಸಭಾಭವನದಲ್ಲಿ ಜನವರಿ 11 ರಂದು ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ ಹಾಗೂ ಹವಾಮಾನ ಆಧಾರಿತ ಕೃಷಿ-ರೈತ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಾರ್ಕಳ ತೋಟಗಾರಿಕಾ ಇಲಾಖೆ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ, ಮತ್ತು ಕಾರ್ಕಳ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕೇಂದ್ರದ ಡಾ. ರೇವಣ್ಣ , ರ, ಡಾ. ಚೈತನ್ಯ ಎಚ್ಎಸ್, ಪ್ರವೀಣ್ ಕೆಎಂ, ಶೃಂಗೇರಿಯ ಡಾ. ಸಂಜೀವ ಜಕಾತಿಮಠ, ಹಾಗೂ ಇತರ ತೋಟಗಾರಿಕೆ, ಸಸ್ಯ ರೋಗ, ಕೀಟಶಾಸ್ತ್ರ ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

Leave a Reply

Your email address will not be published. Required fields are marked *