
Author- Anjali Srinivasa
ಬದುಕು ಅನುಭವಗಳ ಗೂಡು ಜೀವನ ಸುಖ ದುಃಖ ಸಂತೋಷ ಸಹನೆ ಸ್ನೇಹಗಳಂತ ನಾನಾ ಪಾಠಗಳನ್ನು ಜ್ಞಾನದ ದಾರಿ ತೋರುವ ಕಲಿಕೆಯೇ “ಅನುಭವ”
ಬದುಕು ಕಲಿಸಿದ ಪಾಠಗಳಿಂದ ಪ್ರಬುದ್ಧನಾದವ ಬದುಕಿಗೆ ಕೃತಜ್ಞತೆ ತೋರುತ ಬದುಕಿನ ಬುತ್ತಿಯಿಂದ ಮುಂದಿನ ಪೀಳಿಗೆಗೆ ಅನುಭವಗಳ ತುತ್ತುಗಳನ್ನು ಉಣಬಳಸುತ್ತಾನೆ.ಕೆಲವೊಮ್ಮೆ ಅನುಭವಗಳ ಒಂದೊಂದು ತುತ್ತು ಅರಗಿಸಲಾಗದೆ ಆಗಬಹುದು ಕುತ್ತು.ಜಗತ್ತು ಎಷ್ಟೇ ಮುಂದುವರೆದರೂ ನಮ್ಮ ಪೂರ್ವಜರ ಕೊಡುಗೆ ಅತ್ಯಮೂಲ್ಯ. ಮನೆಗಳಲ್ಲಿ ಹಿರಿಜೀವಗಳ ಜೊತೆ ಸಮಯ ಕಳೆಯುತ್ತಿವಲ್ಲ ಅದೇ ಸಂಪತ್ತು ಸಾರ್ಥಕತೆ.ಕೆಲವೊಮ್ಮೆ ಅವರ ಆಲೋಚನೆಗಳು ಹಿಂದಿನ ಕಾಲದವರು ಎಂದು ನಿರ್ಲಕ್ಷ್ಯಿಸಬಹುದು ಅವರ ಮಾತು ಕಿರಿ ಕಿರಿ ಎನಿಸಬಹುದು ಅವರ ಮಾರ್ಗದರ್ಶನ ನಮಗೆ ಮುಳ್ಳಾದಂತೆ ಭಾಸವಾಗಬಹುದು.ಕಾಲ ಬದಲಾದಂತೆ ನಮ್ಮನ್ನ ನಾವು ಬದಲಾಯಿಸಿಕೊಂಡ ರೀತಿ ಇದು.ಹಿರಿಯರ ಪ್ರತಿ ಗೌರವವಿಲ್ಲ ಕಿರಿಯರ ಪ್ರತಿ ಪ್ರೀತಿ ಇಲ್ಲ. ಬದುಕಿನಲ್ಲಿ ನಾವು ಅವರಿವರ ತಪ್ಪುಗಳು ಹುಡುಕುವಲ್ಲಿ ಹಿಂದೂಳಿದು ಬಿಡುತ್ತೆವೆ.ಈಗ ಈ ಜಗತ್ತಲ್ಲಿ ಯಾವ ಮಟ್ಟಿಗೆ ಬಂದು ನಿಂತಿದ್ದೆವೆ ಎಂದರೆ ಇಲ್ಲಿ ತಪ್ಪನ್ನು ತಪ್ಪು ಎನ್ನುವುದೇ ತಪ್ಪಾಗಿದೆ..ಸರಿಯನ್ನು ಸರಿ ಎನ್ನುವುದು ಸರಿ ಆದರೆ ತಪ್ಪನ್ನು ತಪ್ಪು ಎನ್ನುವುದು ತಪ್ಪು.ಹಗಲು ಸತ್ತು ಹೋದ ಊರಲ್ಲಿ ಕತ್ತಲು ಅಮರವಂತೆ ಸತ್ಯಕ್ಕೆ ತಾತ್ಸಾರವಿದ್ದಲ್ಲಿ ಸುಳ್ಳು ಬಿಗುತ್ತ ಇತ್ತು…ಕತ್ತಲಲ್ಲಿ ಬದುಕನ್ನು ಕಂಡುಕೊಂಡವನಿಗೆ ಬೆಳಕೆಂದರೆ ಭಯ ಮನೋರಂಜನೆಗಾಗಿಯೇ ಬದುಕು ಮುಡಿಪಾಗಿಟ್ಟವರಿಗೆ ಗಾಂಭೀರ್ಯತೆಯ ಗತ್ತು ಎಲ್ಲಿಂದ ಬರಬೇಕು..
ಇಟ್ಟಿಗೆಯ ಏಟಿಗೆ ಕಲ್ಲಿಂದ ಹೊಡಿಯುತ್ತೆವೆ ಅವರ ತಪ್ಪಿಗೆ ಅವರಿಗಿಂತ ದೊಡ್ಡ ತಪ್ಪು ಮಾಡುತ್ತೆವೆ.
ತಪ್ಪನ್ನು ತಪ್ಪಿಂದ ತಿದ್ದಲಾಗುವುದಿಲ್ಲ.
ತಪ್ಪನ್ನು ತಪ್ಪು ಎಂದು ಹೇಳುವುದು ತಪ್ಪಲ್ಲ, ಅದು ಮುಖ್ಯವಾಗಿ ಸಮಾಜದ ಸ್ಥಿರತೆ ಮತ್ತು ನೀತಿಶಾಸ್ತ್ರದ ದೃಷ್ಟಿಯಿಂದ ಅವಶ್ಯಕ; ಆದರೆ, ಅದನ್ನು ಹೇಗೆ ಹೇಳಲಾಗುತ್ತದೆ ಮತ್ತು ಪರಿಸ್ಥಿತಿಯ ಮೇಲೆ ಅವಲಂಬಿತವಾಗುತ್ತದೆ. ಕೆಲವೊಮ್ಮೆ, ತಪ್ಪನ್ನು ತಪ್ಪು ಎಂದು ಹೇಳಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಅಥವಾ ಹೇಳುವ ವಿಧಾನದಿಂದ ವಿವಾದಗಳು ಉಂಟಾಗಬಹುದು, ಆದರೆ ಮೂಲಭೂತವಾಗಿ ಸತ್ಯವನ್ನು ಹೇಳುವುದು ಮುಖ್ಯ, ಮತ್ತು ಬುದ್ಧಿವಂತರು ತಪ್ಪುಗಳನ್ನು ತಮ್ಮಲ್ಲಿಟ್ಟುಕೊಳ್ಳದೆ, ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸ ಮಾಡುತ್ತಾರೆ. ಬದುಕು ಅನುಭವಗಳ ಗೂಡು ಹದಿಹರೆಯದ ಮನವೇ ಹಾದಿ ತಪ್ಪದಿರು… ಹಿರಿಯರ ಅನುಭವದ ಮಾತುಗಳು ಜೀವನದ ಸತ್ಯಗಳನ್ನು
ತಿಳಿಸುತ್ತವೆ; ಕೆಲಸದ ಮಹತ್ವ, ಕುಟುಂಬ ಒಗ್ಗಟ್ಟು, ಶಿಸ್ತು, ವಸ್ತ್ರವಿನ್ಯಾಸ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಅವರ ಮಾತುಗಳಿಗೆ ಮೂಗು ಮೂರಿಯುವುದಕ್ಕಿಂತ ಆಲಿಸುವುದು ಕಲಿಯೋಣ ಕೇಳಿಸಿಕೊಂಡರಾಗುವ ನಷ್ಟಗಳೇನಿಲ್ಲ
ಎಲ್ಲರೊಳಗೊಂದಾಗುವ ಮಾತು ಕಲಿಯೋಣ ಮಾತಿನ ಮರ್ಮ ಅರಿಯೋಣ..
