ಮಂಗಳೂರು: ಶಕ್ತಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರ ಮಟ್ಟದ ದೇಶಭಕ್ತಿ ಗೀತೆ ಹಾಗೂ ಸಮೂಹ ಗಾಯನ ಸ್ಪರ್ಧೆಯು ಮಾತೃ ಮಂದಿರ ಸಂಸ್ಥಾನ ಪೂಣೆ ಇವರ ಉಪಸ್ಥಿತಿಯಲ್ಲಿ ಜ 17 ರಂದು ರೇಷ್ಮ ಮೆಮೋರಿಯಲ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.








ಈ ರಾಷ್ಟ ಮಟ್ಟದ ದೇಶಭಕ್ತಿ ಗೀತೆ, ಸಮೂಹ ಗಾಯನ ಸ್ಪರ್ಧೆಯನ್ನು ದೇಶದಾದ್ಯಂತ ಹಲವು ಶಾಲೆಗಳಲ್ಲಿ ನಡೆಸಲಾಗುತ್ತಿದೆ. ರೇಷ್ಮಾ ಮಾತೃ ಮಂದಿರ ಸಂಸ್ಥಾನ ಇದರ ಟ್ರಸ್ಟಿಯಾಗಿರುವ ಕೃಷ್ಣ ಅಭ್ಯಂಕರ್ ಹಾಗೂ ಅವರ ತಂಡ ತೀರ್ಪುಗಾರರಾಗಿ ಶಕ್ತಿ ವಿದ್ಯಾ ಸಂಸ್ಥೆಗೆ ಆಗಮಿಸಿದ್ದು ಶಾಲೆಯ ಸುಮಾರು 1200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಏಕಕಾಲದಲ್ಲಿ ಈ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಷ್ಟೇ ಅಲ್ಲದೆ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದವು ಕೂಡ ಸ್ಪರ್ಧೆಯಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದರು. ಬಳಿಕ ಮಾತನಾಡಿದ ಕೃಷ್ಣ ಅಭ್ಯಂಕರ್ ಅವರು ಈ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು, ಸಂಸ್ಕಾರ ನನಗೆ ತುಂಬಾ ಇಷ್ಟವಾಯಿತು. ಸ್ಪರ್ಧೆಯ ಫಲಿತಾಂಶ ಏನೇ ಇರಲಿ ಆದರೆ ಇವತ್ತು ಇಷ್ಟೊಂದು ಶಿಸ್ತಿನಿಂದ ನೀವೆಲ್ಲರೂ ನಮ್ಮ ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಗೀತೆಯನ್ನು ಹಾಡಿ ನಮ್ಮ ದೇಶದ ಬಗೆಗಿನ ನಿಮ್ಮ ಗೌರವವನ್ನು ತೋರಿಸಿದಿರಿ, ಹಾಗಾಗಿ ನಿಜವಾದ ಅರ್ಥದಲ್ಲಿ ಇಂದೇ ನೀವು ಗೆದ್ದ ಹಾಗೆ ಎಂದರು. ಈ ಸಂದರ್ಭದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ತೀರ್ಪುಗಾರರಾದ ಶ್ರೀಕೃಷ್ಣ ಅಭ್ಯಂಕರ್ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
