ಸರಸ್ವತಿ ಪೂಜೆ ಎಂದರೆ ಜ್ಞಾನ, ಕಲೆ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸುವ ಹಬ್ಬವಾಗಿದ್ದು, ಇದನ್ನು ಮುಖ್ಯವಾಗಿ ವಸಂತ ಪಂಚಮಿ (ಜನವರಿ-ಫೆಬ್ರುವರಿ) ಮತ್ತು ನವರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ, ಈ ದಿನ ವಿದ್ಯಾರ್ಥಿಗಳು, ಕಲಾವಿದರು ತಮ್ಮ ಪುಸ್ತಕಗಳು, ಉಪಕರಣಗಳೊಂದಿಗೆ ದೇವಿಯ ಆಶೀರ್ವಾದ ಪಡೆಯುತ್ತಾರೆ, ಹಳದಿ ಬಣ್ಣದ ಉಡುಗೆ ತೊಟ್ಟು, ಹೂವು, ಸಿಹಿ ನೈವೇದ್ಯ ಅರ್ಪಿಸಿ, ಮಂತ್ರ ಪಠಿಸಿ ಪೂಜೆ ಮಾಡುತ್ತಾರೆ. ಜಗದ ಪ್ರತಿಯೊಂದು ಜೀವಿಯಲ್ಲೂ ಶಾರದೆಯ ಕೃಪೆ ಇರುವುದು.ಕಣ ಕಣದಲ್ಲಿ ಆವರಿಸಿರುವೆ. ಶಬ್ದಗಳ ಸಂಭ್ರಮಿಸುವೆ ಹೇ ಹಂಸವಾಹಿನಿ ಸಾಗರದೊಳಗೆ ಅಡಗಿರುವ ಮುತ್ತುಗಳು ಬೆಳಕಿಗೆ ಬಂದಂತೆ ಪ್ರತಿಯೊಬ್ಬರಲ್ಲೂ ಅಡಗಿದ ವಿದ್ಯೆಯ ಮೇಲೂ ಬೆಳಕು ಚೆಲ್ಲು ಅದೇಷ್ಟೊ

ಸಂಘರ್ಷಗಳಲ್ಲಿಯೂ ಹರ್ಷವನ್ನು ನೀಡು
ಹೇ ಶಾರದೆ ದಯಪಾಲಿಸು ಈ ಬಾಳನು ಬೆಳಕಾಗಿಸು
ಅಕ್ಷರವ ಅರಸುತಿರುವೆ ಆಶಿರ್ವಾದಿಸು
ಪದಗಳ ಪಥದಲಿ ಜೊತೆಯಾಗು
ನುಡಿಯಾಗು ನಡೆಯಲ್ಲಿ ಅಡಿಯಾಗು
ಮನದತೋಟದ ಭಾವಭೃಂಗ ನಾನು
ಜಗವ ನಾನೇನು ಬಲ್ಲೆನು..?
ನಿನ್ನ ಪಾದದಲಿ ಜಗವ ಕಾಣುವೆನು
ಕೋಗಿಲೆಯ ಗಾನದಲ್ಲಿ ನೀನಿರುವೆ
ಮೀನಿನ ಈಜಿನಲಿ ಮಿನುಗುತಿರುವೆ
ಶಿಲೆಯಲಿ ಕಲೆಯಾಗಿ ಅರಳಿರುವೆ
ನವಿಲ ನಾಟ್ಯದಲ್ಲಿ ನವಿರಾಗಿರುವೆ
ಕವಿಯ ಕತೆಯೊಳು ನೀನಿರುವೆ
ಹಕ್ಕಿಯ ಗೂಡಲು ನೀನಿರುವೆ
ಬಳಪದ ಬಣ್ಣದಲ್ಲೂ ನೀನಿರುವೆ
ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ದಯಪಾಲಿಸು
