ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ ಈ 2025-26ನೇ ಸಾಲಿನ ವರ್ಷದ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಸಂಸ್ಥೆಗೆ 100 % ಫಲಿತಾಂಶ ಬಂದಿದೆ.

ಪರೀಕ್ಷೆಗೆ ಕುಳಿತ 20 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿ ಉಳಿದ ಎಲ್ಲಾ 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಇಬ್ಬರು ವಿದ್ಯಾರ್ಥಿ ಉತ್ತಮ ಶ್ರೇಣಿಯಲ್ಲಿ ಕ್ರಮವಾಗಿ ಸುಶ್ಮಿತಾ 537 ಅಂಕ ಹಾಗೂ ಶ್ರುತಿ 510 ಅಂಕ ಪಡೆದು ಉತ್ತಿರ್ಣರಾಗಿ ಸಂಸ್ಥೆಗೆ ಊರಿಗೆ ಕೀರ್ತಿ ತಂದಿದ್ದಾರೆ. ಸ್ಥಾಪಕ ಅಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ, ಸಂಚಾಲಕರಾದ ವಕೀಲೆ ಶ್ವೇತಾ ಜೈನ್ ಪ್ರಾಂಶುಪಾಲೆ ಸೌಮ್ಯಶ್ರೀ ಹಾಗೂ ಅಧ್ಯಾಪಕ ವ್ರoದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಬಾರಿಯ ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಪ್ರಥಮ ಪಿಯುಸಿಯಲ್ಲೂ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣಗೊಂಡಿದ್ದು 100% ಫಲಿತಾಂಶ ಬಂದಿರುದು ಗಮನಾರ್ಹ ಸಾಧನೆಯಾಗಿದೆ.
