ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ವಾರ್ಷಿಕ ಕ್ಯಾಟೆಕಿಸಮ್ ದಿನವನ್ನು ಭಕ್ತಿಭಾವ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಸಮಾರಂಭವು ಪವಿತ್ರ ಬಲಿ ಪೂಜೆ ಆಚರಣೆಯಿಂದ ಆರಂಭಗೊಂಡಿತು. ಮಕ್ಕಳಿಂದ ಸಕಲ ಲಿಟರ್ಜಿ ಅತ್ಯಂತ ಸುಂದರವಾಗಿ ನಡೆಸಲ್ಪಟ್ಟಿತು.




ಕಾರ್ಯಕ್ರಮವು YCS ಸದಸ್ಯರ ಮನಮೋಹಕ ಪ್ರಾರ್ಥನಾ ನೃತ್ಯದೊಂದಿಗೆ ಆರಂಭವಾಯಿತು. ಲವೀನಾ ಡಿಸೋಜಾ ಅವರು ಆತ್ಮೀಯ ಸ್ವಾಗತ ಭಾಷಣ ಮಾಡಿದರು.
ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಮುಖ್ಯೋಪಾಧ್ಯಾಯರಾದ . ಜೇಸನ್ ಮೊನಿಸ್, ಸೂಪೀರಿಯರ್ ಭಗಿನಿ ಇಡೊಲಿನ್ ರೊಡ್ರಿಗ್ಸ್, PPC ಉಪಾಧ್ಯಕ್ಷ ಐಸಾಕ್ ವಾಸ್, ಕಾರ್ಯದರ್ಶಿ ಆಲ್ವಿನ್ ಪಿಂಟೋ, ಸಂಯೋಜಕ ಸಚಿನ್ ನೋರೊನ್ಹಾ ಹಾಗೂ ಬೈಬಲ್ ಮತ್ತು ಕ್ಯಾಟೆಕಿಸಮ್ ಆಯೋಗದ ಸಂಯೋಜಕಿ ಲವೀನಾ ಡಿಸೋಜಾ.
ಕ್ಯಾಟೆಕಿಸಮ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪೂರ್ಣ ಹಾಜರಾತಿ ಹೊಂದಿದವರಿಗೆ ಬಹುಮಾನ ವಿತರಿಸಲಾಯಿತು. ವಂ ಜೇಸನ್ ಮೊನಿಸ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮದಿ ಕೇಕ್ ಕತ್ತರಿಸುವ ಕಾರ್ಯಕ್ರಮದ ಮೂಲಕ ಸಂತೋಷಭರಿತವಾಗಿ ಆಚರಿಸಲಾಯಿತು.
ಧರ್ಮಗುರುಗಳು ಕ್ಯಾಟೆಕಿಸಮ್ ಶಿಕ್ಷಕರನ್ನು ಅವರ ಸಮರ್ಪಿತ ಸೇವೆಗೆ ಸನ್ಮಾನಿಸಿದರು. ತಮ್ಮ ಸಂದೇಶದಲ್ಲಿ ಮುಖ್ಯೋಪಾಧ್ಯಯರಾದ ವಂ. ಜೇಸನ್ ಅವರು ಮಕ್ಕಳಲ್ಲಿ ದೇವರ ವಾಕ್ಯದ ಗೌರವ, ನಂಬಿಕೆ ಮೌಲ್ಯಾದರಿತ ಗುಣಗಳನ್ನು ಬೆಳೆಸುವಲ್ಲಿ ಪೋಷಕರ ಮಹತ್ವದ ಪಾತ್ರವನ್ನು ಒತ್ತಿ ಹೇಳಿದರು. ವಂ ಫ್ರಾನ್ಸಿಸ್ ತಮ್ಮ ಸಂದೇಶದಲ್ಲಿ, ಮಕ್ಕಳಿಗೆ ದೇವರ ಪ್ರೀತಿಯನ್ನು ತಮ್ಮ ಜೀವನದಲ್ಲಿ ಮೊದಲ ಸ್ಥಾನದಲ್ಲಿ ಇರಿಸಿಕೊಳ್ಳಲು ಪ್ರೇರೇಪಿಸಿ, ಆಗ ಉಳಿದ ಎಲ್ಲವೂ ಸರಿಯಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಂಬಿಕೆಯ ಮಹತ್ವವನ್ನು ಬಿಂಬಿಸುವ ನಾಟಕ ಹಾಗೂ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಉತ್ಸಾಹಭರಿತ ನೃತ್ಯಗಳು ಪ್ರದರ್ಶಿಸಲ್ಪಟ್ಟವು.
YCS ವಿದ್ಯಾರ್ಥಿಗಳಾದ ಆಶೆಲ್ ಡಿಸೋಜಾ ಮತ್ತು ಪ್ರವೀಣ್ ಡಿಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ವೀಡಲ್ ಕ್ರಾಸ್ತಾ ಮತ್ತು ಪ್ರಿನೀತ್ ಪಿಂಟೋ ನಿರೂಪಿಸಿದರು. ಮೇರಿ ಪಿಂಟೋ ವಂದಿಸಿದರು.
