ಬಜಗೋಳಿ ಪೆಜತ್ತ ಗುರಿ ರಾಹೆ 169 ಕ್ರಾಸ್ನಲ್ಲಿರುವ ಧರ್ಮಶಾಲೆ ತೀರ್ಥಕ್ಷೇತ್ರ ಸುಮ್ಮ ಗುತ್ತು ಬಂಡಸಾಲೆಯಲ್ಲಿ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಇದೇ ಬರುವ ಜನವರಿ 26, 2026ರಂದು ಭಕ್ತಿಭಾವದಿಂದ ಆಚರಿಸಲಾಗುವುದು.


ಈ ಧಾರ್ಮಿಕ ಕಾರ್ಯಕ್ರಮವು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಭಗವಾನ್ ಮುನಿಸುವ್ರತ ಸ್ವಾಮಿ ಬಸದಿ ತೋರಣ ಮುಹೂರ್ತ, ವಿಮಾನ ಶುದ್ಧಿ, ಭಗವಂತನ ಮಹಾಭಿಷೇಕ, ನಯನೋನ್ಮಿಲನ ನಡೆಯಲಿದೆ. ಮಧ್ಯಾಹ್ನದಲ್ಲಿ ಮುಖವಸ್ತ್ರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದೇ ವೇಳೆ ಶ್ರೀ ಜಿನ ದರ್ಶನ ನಾಗ, ಕ್ಷೇತ್ರಪಾಲ, ಯಕ್ಷಿ ಭೈರವಿ ಪದ್ಮಾವತಿ, ಕುಷ್ಮಾಂಡಿನೀ ದೇವಿಯ ಷೋಡಶೋಪಚಾರ ಪೂಜೆಗಳನ್ನು ವಿವಿಧ ಸೇವಾದಾತರ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳು ಬೆಳಿಗ್ಗೆ ಗಂಟೆ 9ರಿಂದ ಸಂಜೆ 6.30ರವರೆಗೆ ನಡೆಯಲಿವೆ.



ಸಂಜೆ ಗಂಟೆ 6ರಿಂದ ಭಗವಾನ್ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಜರುಗಲಿದೆ.
ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಪುಣ್ಯಭಾಗಿಗಳಾಗಬೇಕು ಎಂದು ಕ್ಷೇತ್ರದ ಟ್ರಸ್ಟಿ ವ್ಯವಸ್ಥಾಪಕ ಶ್ರೀ ವೀರಂಜಯ ಹೆಗ್ಡೆ ತಿಳಿಸಿದ್ದಾರೆ.
