ಕಾರ್ಕಳ: ಕೆ ಜಿ ಟಿ ಟಿ ಐ ನನ್ನ ಕನಸಿನ ಯೋಜನೆ – ವಿ ಸುನಿಲ್ ಕುಮಾರ್

ಕಾರ್ಕಳದಲ್ಲಿರುವ ಕೆ.ಜಿ ಟಿ ಟಿ ಐ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಫೆ. 16 ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ವಿ ಸುನಿಲ್ ಕುಮಾರ್ ರವರು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆ ಜಿ ಟಿ ಟಿ ಐ ನನ್ನ ಕನಸಿನ ಯೋಜನೆ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಕೌಶಲ್ಯ ದೊರೆಯಬೇಕೆಂದು ಆ ಕಾಲದಲ್ಲಿ ನಿಯಮವಳಿಗಳನ್ನು ಸಡಿಲಗೊಳಿಸಿ ಹಲವಾರು ಅಧಿಕಾರಿಗಳು ಸೆಕ್ರೆಟರಿಗಳ ಆಸಕ್ತಿಯಿಂದ ಈ ಯೋಜನೆ ಕಾರ್ಕಳದಲ್ಲಿ ಪ್ರಾರಂಭಗೊಂಡಿದೆ ಅಂದರು.
ಸಿಸ್ಕೊ ಐ.ಟಿ ಎಸೆನ್ಷಿಯಲ್ಸ್ ಟ್ಯಾಲಿ ಹಾಗೂ ಸಿ.ಎನ್‌.ಸಿ ಕೋರ್ಸ್ ಪೂರೈಸಿದ 80 ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿದ್ಯಾರ್ಥಿಗಳು ತಾವು ಪಡೆದ ಕೌಶಲ್ಯ ಶಿಕ್ಷಣದ ಕುರಿತು ತಮ್ಮ ಅನಿಸಿಕೆಗಳನ್ನು ಮತ್ತು ಇದರಿಂದ ದೊರೆತ ಪ್ರಯೋಜನಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕೆ.ಜಿ.ಟಿ.ಟಿ.ಐ ನಿರ್ದೇಶಕ ಡಾ.ಗಿರಿಧರ್ ಸಾಲಿಯಾನ್ ಸ್ವಾಗತಿಸಿ ಪ್ರಸ್ತಾವನೆಗೈದು ಸಂಸ್ಥೆಯು ಕೇವಲ ಸ್ಥಳೀಯ ಮಟ್ಟದ ತರಬೇತಿಯನ್ನಷ್ಟೇ ನೀಡದೆ ಜರ್ಮನ್ ತಂತ್ರಜ್ಞಾನದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕೌಶಲವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ ಈಗಾಗಲೇ ನೂರಾರು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ ಹಲವಾರು ಸ್ವಂತ ಉದ್ಯೋಗ ಆರಂಭಿಸಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಸಹನ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ್ ಎಸ್, ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುಧಾಕರ್ ಕೆ.ಜಿ ಹಾಗೂ ಬಂಡಿಮಠ ಡಾ.ಬಿ.ಆರ್ ಅಂಬೇಡ್ಕರ್ ಹಾಸ್ಟೆಲ್ ಸುಪರಿಂಟೆಂಡೆಂಟ್ ಜಯಂತಿ ಸುರೇಶ್ ಶೆಟ್ಟಿ ಉಪನ್ಯಾಸಕರಾದ ದೀಪಿಕಾ, ಗೌತಮ್ ವಿಂಧ್ಯಾ, ಸುಶ್ಮಿತಾ ಉಪಸ್ಥಿತರಿದ್ದರು. ರಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *