ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ಬದುಕಿಗೆ ಉತ್ತಮ ಮಾರ್ಗದರ್ಶನವನ್ನು ಮಹಾವೀರ ಕಾಲೇಜು ನೀಡುತ್ತಿದೆ – ಸತೀಶ್ ಪೈ

ವರದಿ ರಾಯಿ ರಾಜಕುಮಾರ
ಮಣಿಪಾಲ ಮಾಹೆ ವಿದ್ಯಾ ಸಂಸ್ಥೆ, ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಮಹಾವೀರ ಕಾಲೇಜಿನ ಜಂಟಿ ಆಶ್ರಯದಲ್ಲಿ ಉದ್ಯೋಗಕ್ಕೆ ಅನುಕೂಲ ತರಬೇತಿಯನ್ನು ಮಾರ್ಚ್ 18ರಂದು ಮಹಾವೀರ ಕಾಲೇಜು ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿತ್ತು. ಮಣಿಪಾಲ ಮಾಹೆ ಸಂಸ್ಥೆಯ ನಿರ್ದೇಶಕ ಸತೀಶ್ ಪೈ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ 60 ವರ್ಷಗಳ ಸುದೀರ್ಘ ಉತ್ತಮ ಚರಿತ್ರೆಯನ್ನು ಹೊಂದಿರುವ ಮಹಾವೀರ ಕಾಲೇಜು ವಿದ್ಯಾರ್ಥಿಗಳನ್ನು ಕಲಿಯುವಿಕೆಯೊಂದಿಗೆ ಬದುಕಿನ ಭವಿಷ್ಯಕ್ಕೆ ಅಗತ್ಯವಿರುವ ಸಂಪೂರ್ಣ ತರಬೇತಿಯನ್ನು ಸದಾ ನೀಡುತ್ತಾ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಹಾವೀರ ಕಾಲೇಜಿನ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ ಮೈಂಡ್ ಫುಲ್ ಕನ್ಸಲ್ಟಿಂಗ್ ಸಂಸ್ಥೆಯ ಸಂಸ್ಥಾಪಕ, ಸಂಜಯ್ ಭಟ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಪ್ರಾಧಾನ್ಯತೆಯನ್ನು ಕೊಡಬೇಕು. ಕಲಿಕೆಯೊಂದಿಗೆ ಬದುಕಿಗೆ ಬೇಕಾಗಿರುವ ಎಲ್ಲ ರೀತಿಯ ತರಬೇತಿಗಳನ್ನು ಕಾಲೇಜು ನೀಡುತ್ತಿರುವುದರಿಂದ ಅದೆಲ್ಲರದಲ್ಲಿ ಪ್ರಾಯೋಗಿಕವಾಗಿ ಭಾಗವಹಿಸಿ ಹೆಚ್ಚಿನ ಶ್ರೇಷ್ಠತೆಯನ್ನು ಪಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಹಿಂದೆ ಏಳು ಮಂದಿ ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗವನ್ನು ಪಡೆದಿದ್ದು ತಮ್ಮ ಕಲಿಕೆಯನ್ನು ಬಹಳ ಕಡಿಮೆ ಖರ್ಚಿನಲ್ಲಿ ಮುಂದುವರೆಸುತ್ತಿರುವ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಾದ ಸಂಶೋಧ ಹಾಗೂ ಮಂದಾರ ಅವರು ಚಿಕನ್ ಮತ್ತು ಬನಾನಾದ ಪ್ರಾಯೋಗಿಕ ತರಬೇತಿಯ ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ತರಬೇತಿಯ ಸದುಪಯೋಗವನ್ನು ಮಾಡಿಕೊಂಡು ಬದುಕಿನಲ್ಲಿ ಉಪಯೋಗಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ, ಉಪನ್ಯಾಸಕಿ ಸವಿತಾ ಕೋಟ್ಯಾನ್ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳಾದ ಮಂದಾರ ಸ್ವಾಗತಿಸಿದರು. ಶ್ರೇಯ ಎಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಭೂಮಿ ವಂದಿಸಿದರು. ಕುಶಾಗ್ರ ಮತ್ತು ತಂಡದವರು ಪ್ರಾಯೋಗಿಕ ತರಬೇತಿಯನ್ನು ಪ್ರಸ್ತುತಪಡಿಸಿದ್ದರು.

Leave a Reply

Your email address will not be published. Required fields are marked *