ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ 09 ಗುರುವಾರದಂದು ಪೋಷಕರ ಸಭೆ ನಡೆಯಿತು. ಈ ಸಭೆಯಲ್ಲಿ ನಮ್ಮ ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ, ನಾಗಭೂಷಣ ಜೋಶಿ, ರವೀಂದ್ರನಾಥ ಜೋಶಿ, ಪೂರ್ವ ವಿದ್ಯಾರ್ಥಿಯಾದ ಸುಜಯಾ ಶ್ರೀನಿವಾಸ ನಾತು, ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಏಳನೇ ತರಗತಿಯ ಮಕ್ಕಳಿಗೆ ನಿರಖು ಠೇವಣಿ ಮತ್ತು ಸಂಚಯಿಕಾ ನೀಡುವ ಕಾರ್ಯಕ್ರಮ ನಡೆಸಲಾಯಿತು. ಮತ್ತು ವೇದಗಣಿತ ಹಾಗೂ ಅಬಾಕಸ್ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಶೈಕ್ಷಣಿಕ ವಿಚಾರ ವಿನಿಮಯದಲ್ಲಿ ಪೋಷಕರ ಅಭಿಪ್ರಾಯ ಮತ್ತು ಮುಂದಿನ ವರ್ಷದಲ್ಲಿ ಶೈಕ್ಷಣಿಕ ವಿಷಯದಲ್ಲಿ ಬದಲಾವಣೆ ಬಗ್ಗೆ ಚರ್ಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ವಸಂತಿ,ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಸ್ವಾಗತಿಸಿ, ಜ್ಯೋತಿ ಗೋರೆಯವರು ವಂದನಾರ್ಪಣೆ ಗೈದರು.
