ಕಾರ್ಕಳ: ಅಜೆಕಾರು ಪದ್ಮ ನಗರ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಏಪ್ರಿಲ್ 11 ರಂದು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಜೆ ಪುತ್ತೂರು ಜಗದೀಶ್ ಬಳಗದಿಂದ ಭಕ್ತಿ ಗಾನ ವೈಭವ ಕಾರ್ಯಕ್ರಮ ಜರುಗಿತು.

ಭಕ್ತಿ ಪ್ರಧಾನ ಹಾಡುಗಳೊಂದಿಗೆ ಅರ್ಥಪೂರ್ಣ ತತ್ವಗೀತೆ, ಯುವಜನತೆಗೆ ಮೌಲ್ಯಧಾರಿತ ನುಡಿಗಳೊಂದಿಗೆ ಉತ್ತಮ ಸಂದೇಶದ ಸಂಜೆ ಸಂಪನ್ನಗೊಂಡಿತು. ಈ ದಿನದ ಕಾರ್ಯಕ್ರಮಕ್ಕೆ ಆಗಮಿಸಿ ಬೆಳಗಾವಿ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರಾದ ಮಂಜುನಾಥ ನಾಯಕ್, ಪಂಚ ಯಕ್ಷಗಾನ ಮೇಳಗಳ ಮುಖ್ಯಸ್ಥರಾದ ಕಿಶನ್ ಹೆಗ್ಡೆ, ಮಂಗಳೂರಿನ ಕಾರ್ಮಿಕ ಇಲಾಖಾ ಅಧಿಕಾರಿ ಶ್ರೀಯುತ ಕುಮಾರ್, ಅಜೆಕಾರು ಜ್ಞಾನಸುಧಾ ಮಹಾಗಣಪತಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ, ಉದ್ಯಮಿ ರಘುವೀರ್ ಹೆಗ್ಡೆ, ವಿಜಯ ಶೆಟ್ಟಿ, ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆಯವರು, ಊರ ಪರವೂರ ಗಣ್ಯರು, ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರು, ವಿವಿಧ ಮಂಡಳಿಗಳ ಸ್ವಯಂಸೇವಕರು ಆಗಮಿಸಿ ಶುಭಹಾರೈಸಿದರು.
ಅಜೆಕಾರು ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾಕ್ಟರ್ ಸುಧಾಕರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶ್ರೀಮಹಾಗಣಪತಿ ದೇವರ ಪತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವ ದಿನಾಂಕ 12.4.2026 ಭಾನುವಾರ ಶ್ರೀ ಸುಬ್ರಮಣ್ಯ ಮಠದ ಸ್ವಾಮೀಜಿಯವರಿಂದ ನಡೆಯಲಿದೆ.
