ಗೋರೆಗಾಂವ್‌ನಲ್ಲಿನ ನೀಲಗಿರಿ ನಿವಾಸದಲ್ಲಿ ಸುವರ್ಣ ಸಹೋದರರಿಂದ ನೆರವೇರಿಸಲ್ಪಟ್ಟ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಕಾರ್ಯಕ್ರಮ

ಮುಂಬಯಿ, : ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಮತ್ತು ಸಹೋದರರು ಗೋರೆಗಾಂವ್ ಪೂರ್ವದ ದಿವಂಗತ ಜಯ ಸಿ.ಸುವರ್ಣ ಮಾರ್ಗದಲ್ಲಿನನೀಲಗಿರಿ ನಿವಾಸದಲ್ಲಿ ಕಳೆದ ಶನಿವಾರ ವರ್ಷಂಪ್ರತಿಯಂತೆ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿದರು

ಕೋಟಿ-ಚೆನ್ನಯ ಮತ್ತು ಕಾಂತಬಾರೆ ಬೂದಬಾರೆ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಆರತಿ ನೆರವೇರಿಸಿ, ‘ಬಿಲ್ಲವ ಭೀಷ್ಮ’ ಪ್ರಸಿದ್ಧ ಸ್ವರ್ಗೀಯ ಜಯ ಸಿ.ಸುವರ್ಣ ಮತ್ತು ಲೀಲಾವತಿ ಜೆ.ಸುವರ್ಣ ದಂಪತಿಯನ್ನು ಸ್ಮರಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಾಯಿತು. ಸೂರ್ಯಕಾಂತ್ ಜೆ.ಸುವರ್ಣ, ನಿಶಿತಾ ಸೂರ್ಯಕಾಂತ್, ಸುಭಾಶ್ ಜೆ.ಸುವರ್ಣ, ಸೌಮ್ಯ ಸುಭಾಶ್, ದಿನೇಶ್ ಜೆ.ಸುವರ್ಣ, ದೀಪ್ತಿ ದಿನೇಶ್, ಯೋಗೇಶ್ ಜೆ.ಸುವರ್ಣ, ದೀಪ್ತಿ ಯೋಗೇಶ್ ದಂಪತಿಗಳ ಸಹಿತ ಸುವರ್ಣ ಪರಿವಾರವು ವಿಶೇಷ ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು. ಚಂದ್ರಶೇಖರ್ ಎಸ್.ಪೂಜಾರಿ (ಭಾರತ್ ಬ್ಯಾಂಕ್‌ನ ನಿರ್ದೇಶಕ) ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿ ಅನುಗ್ರಹಿಸಿ ಯಶೋಧರ ದಿ.ಪೂಜಾರಿ, ವಾಸು ಸಫಲಿಗ, ನಾಗೇಶ್ ಸುವರ್ಣ ಅವರನ್ನೊಳಗೊಂಡು ಶನೀಶ್ವರ ಗ್ರಂಥ ಪಾರಾಯಣಗೈದರು. ಭಜನೆ, ಶನಿಗ್ರಂಥ ಪಾರಾಯಣ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಶಿವಸೇನೆ (ಉದ್ಧಾವ್ ಠಾಕ್ರೆ) ಪಕ್ಷದ ಧುರೀಣ, ಮಹಾರಾಷ್ಟ್ರ ಸರ್ಕಾರದ ದಿಂಡೋಶಿ ಕ್ಷೇತ್ರದ ಶಾಸಕ ಸುನೀಲ್ ಪ್ರಭು, ಉದಯ ಎಸ್.ಶೆಟ್ಟಿ, ಗುಣಪಾಲ್ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಪ್ರೇಮನಾಥ ಎಸ್.ಸಾಲಿಯಾನ್ (ಅಭ್ಯುದಯ), ಮುಂಡ್ಕೂರು ರತ್ನಾಕರ್ ಶೆಟ್ಟಿ, ಗಣೇಶ್ ಕರ್ಕೇರ ಥಾಣೆ, ಸುಭಾಷ್ ಪಾಲನ್ ಡೊಂಬಿವಿಲಿ, ಪ್ರದೀಪ್ ಪೂಜಾರಿ (ಸಾಗರ್), ಗಣೇಶ್ ಪೂಜಾರಿ ಥಾಣೆ, ಭಾರತ್ ಬ್ಯಾಂಕ್‌ನ ಉಪಕಾರ್ಯಾಧ್ಯಕ್ಷ ನ್ಯಾಯವಾದಿ ಸೋಮನಾಥ್ ಬಿ. ಅಮೀನ್, ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲಿಯಾನ್, ಗಂಗಾಧರ ಜೆ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಮೋಹನದಾಸ್ ಜಿ.ಪೂಜಾರಿ, ನಿರಂಜನ್ ಲಕ್ಷ ಣ ಪೂಜಾರಿ, ಸಂತೋಷ್ ಕೆ.ಪೂಜಾರಿ, ದಯಾನಂದ ಆರ್.ಪೂಜಾರಿ, ಗಣೇಶ್ ಡಿ.ಪೂಜಾರಿ, ಹರೀಶ್ ವಿ.ಪೂಜಾರಿ, ನಾರಾಯಣ ಎಲ್.ಸುವರ್ಣ, ಸುರೇಶ್ ಬಿ.ಸುವರ್ಣ, ಅನ್ಬಲಗನ್ ಸಿ.ಹರಿಜನ, ಗೌರೇಶ್ ಆರ್. ಕೋಟ್ಯಾನ್, ಜಯಲಕ್ಷ್ಮಿ ಪಿ.ಸಾಲಿಯಾನ್, ಜಯಶ್ರೀ ಎಂ.ಹೆಜಮಾಡಿ, ಆಡಳಿತ ಮಂಡಳಿ ಸದಸ್ಯರುಗಳಾದ ಅಶೋಕ್ ಕೆ.ಕೋಟ್ಯಾನ್, ನಿತ್ಯಾನಂದ ಡಿ.ಕೋಟ್ಯಾನ್,ಆಡಳಿತ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ ಎಸ್.ಕಾರ್ಕೆರಾ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್ ಸೇರಿದಂತೆ ನಗರದಲ್ಲಿನ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸುವರ್ಣ ಪರಿವಾರದ ಹಿತೈಷಿಗಳು, ಬಂಧು ಮಿತ್ರರು, ನೂರಾರು ಗಣ್ಯರು ಆಗಮಿಸಿ ಪಾರಾಯಣದಲ್ಲಿ ಭಾಗಿಗಳಾಗಿ ಪ್ರಸಾದ ಸ್ವೀಕರಿಸಿ ಶ್ರೀ ಶನೀಶ್ವರನ ಕೃಪೆಗೆ ಪಾತ್ರರಾದರು.

Leave a Reply

Your email address will not be published. Required fields are marked *