ಉಡುಪಿ ಏಪ್ರಿಲ್ 3: ಕರೋನಾ ನಿಯಂತ್ರಣದ ಅಂಗವಾಗಿ, ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಘಟಕ, ಕರೋನಾ ಸೈನಿಕರು, ಉಡುಪಿ ಜಿಲ್ಲೆಯ ಇವರ ವತಿಯಿಂದ ಗುರುವಾರ, ಉಡುಪಿಯ ಬೋರ್ಡ್ ಹೈಸ್ಕೂಲ್, ಹಾರಾಡಿ ಗಾಂಧೀನಗರ ಕಾಲೋನಿ, ಬೈಕಾಡಿ ಕಾಲೋನಿ ಮತ್ತು ಬಾರಕೂರು ನಲ್ಲಿದ್ದ ಕಾರ್ಮಿಕರಿಗೆ 1400 ಮಾಸ್ಕ್ ಗಳು, ಸ್ಯಾನಿಟೇಸರ್‍ಗಳು, ಸೋಪುಗಳು, ಕರಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಉಡುಪಿ ರೆಡ್ ಕ್ರಾಸ್ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.