ಉಡುಪಿ: ಕೊವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟವ ಹಿನ್ನೆಲೆಯಲ್ಲಿ ಎಪ್ರಿಲ್ ಮತ್ತು ಮೇ 2020ರ ಮಾಹೆಯಲ್ಲಿ ಪಡಿತರವನ್ನು ಏಕಕಾಲದಲ್ಲಿ ನೀಡಲು ಅವಕಾಶ ಕಲ್ಪಿಸಿರುವುದರಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬರುವ ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿ ಇರುವ ಯಾವುದೇ ಓರ್ವ ಸದಸ್ಯರ ಆಧಾರ್ ನಂಬರ್ ಗೆ ನೋಂದಾಯಿತವಾಗಿರುವ ಮೊಬೈಲ್ ಗೆ ಬರುವ ಓಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿರುವುದರಿಂದ ಎಲ್ಲಾ ಪಡಿತರ ಚೀಟಿದಾರರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಕಡ್ಡಾಯವಾಗಿ ಆದಾರ್ ನೋಂದಾಯಿತವಾಗಿರುವ ಮೊಬೈಲ್ ನ್ನು ತಂದು ಓಟಿಪಿ ಮೂಲಕ ಪಡಿತರ ಪಡೆಯುವಂತೆ ತಿಳಿಸಿದೆ. ಒಂದುವೇಳೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೋಂದಾಯಿತವಾಗಿಲ್ಲದಿದ್ದಲ್ಲಿ ಅವರ ಬಳಿ ಲಭ್ಯವಿರುವ ಮೊಬೈಲ್ ಸಂಖ್ಯೆ ನಮೂದಿಸಿ ಓಟಿಪಿ ಮೂಲಕ ಪಡಿತರ ಪಡೆಯಲು ಅವಕಾಶವಿರುತ್ತದೆ. ಅದೇ ರೀತಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್ 2020ರ ಮಾಹೆಯಲ್ಲಿ ಎಲ್ಲಾ ದಿನಗಳಲ್ಲಿ ಲಭ್ಯವಿರುವದರಿಂದ ಹೆಚ್ಚಾಗಿ ಗುಂಪು ಗೂಡದೇ ಪಡಿತರ ಪಡೆಯುವಾಗ ಪಡಿತರ ಚೀಟಿದಾರರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಟ್ ಗಳನ್ನು ಧರಿಸಿಕೊಂಡು ಸಾನಿಟೈಸರ್ ಗಳನ್ನು ಉಪಯೋಗಿಸಿ ಪಡಿತರ ಪಡೆದುಕೊಂಡು ನ್ಯಾಯಬೆಲೆ ಅಂಗಡಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ತಿಳಿಸಿದೆ.