ಉಡುಪಿ (ಜುಲೈ 13): ಉಡುಪಿ ಜಿಲ್ಲೆಯ ಗಡಿಯನ್ನು ಸಂಪೂರ್ಣ ಬಂದ್ ಮಾಡಿ , ಯಾರೂ ಬಾರದಂತೆ ನೋಡಿಕೊಂಡರೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣವನ್ನು ಮಾಡಲು ಸಾಧ್ಯವಾಗಲಿದೆ ಎಂದು ಸೋಮವಾರ ನಡೆದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪರೆನ್ಸ್ ನಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಅದರಂತೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಮಂಗಳವಾರ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದ ಬಗ್ಗೆ ನಿಲುವುಗಳು ಏನಿದೆ ಎಂಬುದನ್ನು ಚರ್ಚಿಸಿ , ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವುದಾದರೂ ಸಹ , ಹೋಗುವವರಿಗೆ ಬರುವವರಿಗೆ ಒಂದು ಅವಕಾಶವನ್ನು ಕಲ್ಪಿಸಿ , ಲಾಕ್ ಡೌನ್ ಮಾಡಲಾಗುವುದು. ಅಥವಾ ಜಿಲ್ಲೆಯನ್ನು ಸೀಲ್ ಡೌನ್ ಮಾಡಲಾಗುವುದು. ಜಿಲ್ಲೆಯಲ್ಲಿ ಉಳಿದೆಲ್ಲ ಚಟುವಟಿಕೆಗಳು ಯಥಾ ಪ್ರಕಾರ ನಡೆಯಬೇಕು ಎಂದಾದರೆ ಅದಕ್ಕೂ ಸಹ ಒಂದು ದಿನ ಅವಕಾಶವನ್ನು ನೀಡಿಯೇ ನಿರ್ಧಾರ ತೆಗೆದುಕೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮೌಲ್ಯಮಾಪನವು ಉಡುಪಿ ಜಿಲ್ಲೆ ಲಾಕ್ ಡೌನ್ ಅಥವಾ ಗಡಿ ಸೀಲ್ ಡೌನ್ ಆದರೂ ಮೌಲ್ಯಮಾಪನವು ಮುಂದುವರಿಯುತ್ತೆ, ಅದಕ್ಕಾಗಿ ಶಿಕ್ಷಕರಿಗೆ ಬಸ್ಸಿನ ವ್ಯವಸ್ಥೆ ಸೇರಿದಂತೆ, ಮೌಲ್ಯಮಾಪನ ಮುಗಿಯುವವರೆಗೂ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು.
ಬಸ್ಸಿಗಳಲ್ಲಿ ನಿಗಧಿತ ಸಂಖ್ಯೆಗಿoತ ಹೆಚ್ಚುವರಿ ಜನ ಹಾಕಿಕೊಂಡು ಹೋಗುವ ಕುರಿತಂತೆ, ಈಗಾಗಲೇ 18 ರಿಂದ 20 ಡ್ರೈವರ್ ಕಂಡಕ್ಟರ್ ಮತ್ತು ಬಸ್ ಮಾಲೀಕರ ಮೇಲೆ ಕೇಸುಗಳನ್ನು ದಾಖಲಿಸಲಾಗಿದೆ ಎಂದು ಆರ್.ಟಿ.ಓ ಮಾಹಿತಿ ನೀಡಿದ್ದಾರೆ. ಸರಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಯಾರೂ ನಿಯಮ ಉಲ್ಲಂಘನೆ ಮಾಡುತ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ನಾಳಿನ ಸಭೆಯಲ್ಲಿ ಸಾರ್ವಜನಿಕ ಬಸ್ಸು ಸಂಚಾರ ಬೇಕಾ ಬೇಡವೇ ಎಂಬ ಬಗ್ಗೆ ಸಹ ಚರ್ಚೆ ಮಾಡಲಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ಸಮಾರಂಭಗಳಲ್ಲೂ ಇದುವರೆಗೂ 50 ಕ್ಕಿಂತ ಹೆಚ್ಚು ಜನ ಸೇರಿಲ್ಲ. ಪ್ರತಿ ಮದುವೆಗಳಿಗೆ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ, ಹೆಚ್ಚು ಸೇರಿರುವ ಪ್ರಕರಣಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.
ಸಾಕಷ್ಟು ಸಂಘ-ಸoಸ್ಥೆಗಳು ಇನ್ನೂ ಸಹ 50 ರೊಳಗಿನ ಯಾವುದೇ ಸಭೆ-ಸಮಾರಂಭಗಳನ್ನು ಮಾಡಬಾಹುದೆಂದು ತಿಳಿದೊಕೊಂಡರೆ, ಅಂತಹ ಯಾವುದೇ ಸಂಘ-ಸoಸ್ಥೆಗಳು ಸಭೆ-ಸಮಾರಂಭಗಳನ್ನು ಸಾರ್ವಜನಿಕರು ಮಾಡುವಂತಿಲ್ಲ. ಯಾರೂ ಸಭೆ-ಸಮಾರಂಭಗಳನ್ನು ಆಯೋಜಿಸುತ್ತರೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ ಎಸ್.ಓ.ಪಿ ಪ್ರಕಾರ ಯಾವುದೇ ಹಬ್ಬ-ಹರಿದಿನಗಳನ್ನು ಮಾಡುವಂತಿಲ್ಲ. ಹಬ್ಬ-ಹರಿದಿನಗಳನ್ನು ಮನೆಯಲ್ಲಿ ಮಾತ್ರ ಆಚರಿಸಬೇಕು. ಸಾರ್ವಜನಿಕರು ಅಥವಾ ಉಳಿದ ಯಾರೂ ಸೇರುವಂತಿಲ್ಲ. ಮನೆಯಲ್ಲಿ ಆಚರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.