ಉಡುಪಿ : ಉಡುಪಿ ಪಿಪಿಸಿ ರೋಡ್ ಸುನಂದಾ ದೇವದಾಸ್ ಟವರ್ಸ್‍ನ 1ನೇ ಮಹಡಿಯ ನಿವಾಸಿ ಪಾoಡುರಂಗ ನರಸಿಂಹ ಪೈ (70 ವರ್ಷ) ಎಂಬುವವರು ಜುಲೈ 16 ರಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ಕಾಣೆಯಾಗಿದ್ದು, 5 ಅಡಿ 7 ಇಂಚು ಎತ್ತರವಿದ್ದು, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಕೊಂಕಣಿ, ತುಳು ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.