ಮಂಗಳೂರು : ತುಳು ಭಾಷೆ-ಸಂಸ್ಕೃತಿ-ಸಂಸ್ಕಾರಕ್ಕಾಗಿ ಎಲೆ ಮರೆಯಲ್ಲಿರುವ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವ ಮೂಲಕ ಅವರ ನೈಜ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಕೆಲಸ ಮಾಡಬೇಕು, ಇದರಿಂದ ಸಮಾಜದಲ್ಲಿ ಇನ್ನಷ್ಟು ಸಾಧಕರಿಗೆ ಅವರ ಗೌರವ ಪ್ರೇರಣೆಯಾಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದರು.
ಅಕ್ಟೋಬರ್ 30ರಂದು ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ "ಸಿರಿ ಚಾವಡಿ"ಯಲ್ಲಿ ನಡೆದ ತಿಂಗೊಲ್ದ ಚಾವಡಿ ತಮ್ಮನ ಬೊಕ್ಕ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ತುಳುವೆರ್ ಕುಡ್ಲ ಹಾಗೂ ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಯುವ ಸಮುದಾಯಕ್ಕೆ ನಡೆದ "ಸಬಿ ಸವಾಲ್"ನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನಗದು, ಪ್ರಶಸ್ತಿ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ತುಳು-ಕನ್ನಡ ಸಿನಿಮಾ ನಟ ಸೂರ್ಯೋದಯ ಪೆರಂಪಳ್ಳಿ ಅವರು ನಿರ್ಮಿಸಿ, ನಿರ್ದೇಶಿಸಿದ ಅಕಾಡೆಮಿ ಸದಸ್ಯೆ ಕಲಾವತಿ ದಯಾನಂದ ಅವರು ಹಾಡಿರುವ "ಸೋಬಾನೆ" ತುಳು ಜನಪದ ಹಾಡನ್ನು ಲೋಕಾರ್ಪಣೆಗೊಳಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಉಪಾಧ್ಯಕ್ಷ ಸ್ವರ್ಣಸುಂದರ್, ಪತ್ರಕರ್ತ ಮೋಹನದಾಸ್ ಮರಕಡ, ಸೂರ್ಯೋದಯ ಪೆರಂಪಳ್ಳಿ, ತುಳುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಪ್ರತೀಕ್ ಪೂಜಾರಿ, ಕರಾವಳಿ ಕುರುಬರ ಸಂಘದ ಉಪಾಧ್ಯಕ್ಷ ನವೀನ್ ಗಾಂಧಿನಗರ, ಅಕಾಡೆಮಿಯ ಸದಸ್ಯರಾದ ಕಲಾವತಿ ದಯಾನಂದ್, ನಿಟ್ಟೆ ಶಶಿಧರ ಶೆಟ್ಟಿ, ಮಲ್ಲಿಕಾ ಅಜಿತ್ಕುಮಾರ್ ಶೆಟ್ಟಿ, ಚೇತಕ್ ಪೂಜಾರಿ, ರವಿ ಪಿ.ಎಂ. ಮಡಿಕೇರಿ, ನರೇಂದ್ರ ಕೆರೆಕಾಡು ಕಾರ್ಯಕ್ರಮದ ಸದಸ್ಯ ಸಂಚಾಲಕ ನಾಗೇಶ್ ಕುಲಾಲ್, ಕುಳಾಯಿ, ರಿಜಿಸ್ಟ್ರಾರ್ ಕವಿತಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೇಶವ ಶಕ್ತಿನಗರ ಅವರಿಗೆ ಚಾವಡಿ ಪ್ರಶಸ್ತಿ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಯಾಗಿ ಶಶಿಧರ್ ಪೊಯ್ಯತ್ಬೈಲ್, ಯುವ ಸಾಧಕ ಪ್ರಶಸ್ತಿಯಲ್ಲಿ ಡಾ.ಅರುಣ್ ಉಳ್ಳಾಲ್, ಬಾಲ ಪ್ರತಿಭಾ ಪ್ರಶಸ್ತಿಯಲ್ಲಿ ತೀರ್ಥ ಪೊಳಲಿ ಹಾಗೂ ವಿಶೇಷ ಸಂಘಟನಾ ಪ್ರಶಸ್ತಿಯಲ್ಲಿ ತುಳುವೆರೆ ಕೂಟ ಶಕ್ತಿನಗರ ಇವರನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಸದಸ್ಯ ಸಂಚಾಲಕ ನಾಗೇಶ್ ಕುಲಾಲ್ ಕುಳಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ಮಲ್ಲಿಕಾ ಅಜಿತ್ಕುಮಾರ್ ಶೆಟ್ಟಿ, ಚೇತಕ್ ಪೂಜಾರಿ, ರವಿ ಪಿ.ಎಂ. ಮಡಿಕೇರಿ ಸನ್ಮಾನ ಪತ್ರ ವಾಚಿಸಿದರು, ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.