ರಾಮನಗರ:- ಕೊರೊನಾ ಸೋಂಕಿನ ಭೀತಿಯಿಂದಾಗಿ ಈ ಭಾರಿಯ ಶೈಕ್ಷಣಿಕ ವರ್ಷ ಆರಂಭ ತಡವಾಗಿದ್ದು, ಮಕ್ಕಳ ಕಲಿಕೆ ನಿರಂತವಾಗಿರಬೇಕೆಂದು ಸದ್ಯ ಆನ್ಲೈನ್ ಪಾಠ ನಡೆಯುತ್ತಿದೆ. ಜತೆಗೆ ಮನೆಮನೆ ಪಾಠವೂ ಜಾರಿಯಲ್ಲಿದೆ. ಆದರೂ ಶಾಲೆ ಆರಂಭ ಯಾವಾಗ ಎಂಬ ಪ್ರಶ್ನೆಯೂ ದಟ್ಟವಾಗಿದೆ.

ಈ ಕುರಿತು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಕೇಂದ್ರ ಸರ್ಕಾರ ಸೂಚಿಸಿದರೆ ಕೂಡಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ. 

ಪ್ರತಿ ಶನಿವಾರ ಸೇರಿ 160 ದಿನಗಳು ಸಿಕ್ಕರೆ ವಿದ್ಯಾರ್ಥಿಗಳಿಗೆ ಪಾಠ ಕಲಿಸಬಹುದು ಎಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ. ಈ ಹಿಂದೆ 220 ದಿನ ತರಗತಿ ನಡೆಸಲಾಗುತ್ತಿತ್ತು. ಮುಂದೆ ಇನ್ನೆಷ್ಟು ದಿನಗಳು ಸಿಗುತ್ತವೆ ಎಂದು ಕಾದು ನೋಡಲಾಗುತ್ತಿದೆ ವಾರದೊಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.

ಮಕ್ಕಳಿಗೆ ಕೊಲಂಬಸ್, ವಾಸ್ಕೋಡಿಗಾಮಾ ಬಗ್ಗೆ ತಿಳಿಸುವ ಮೂಲಕ ಸ್ಥಳೀಯ ಮಹತ್ವಗಳನ್ನು ಮರೆಯುತ್ತಿದ್ದೇವೆ. ಇದರಿಂದ ಹೊರಬರಲು ರಾಜ್ಯ ವ್ಯಾಪ್ತಿಯಲ್ಲಿ ಆಯಾ ತಾಲೂಕಿನ ಮಹಾನ್ ವ್ಯಕ್ತಿ, ಪ್ರಸಿದ್ಧ ಜಾಗಗಳನ್ನು ಪರಿಚಯಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

For English News:- https://www.pingara.com/post/school-starts-after-central-governments-approval-suresh-kumar