ಮಂಗಳೂರು : ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಆಕಾಶವಾಣಿ ಮಂಗಳೂರು, ರೋಟರ್ಯಾಕ್ಟ್ ಮಂಗಳೂರು ಸಿಟಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಏ.11ರಂದು ಗುರುವಾರ 4 ಗಂಟೆ 30 ನಿಮಿಷದಿಂದ 6 ಗಂಟೆಯವರೆಗೆ “ನಡಿಗೆ ಮತದಾನದೆಡೆಗೆ”- ‘ವಾಕ್ ವಿತ್ ಟಾಕ್’ ಮತದಾರರ ವಿಶೇಷ ಜಾಗೃತಿ ಕಾರ್ಯಕ್ರಮವು ಕದ್ರಿ ಉದ್ಯಾನವನದಲ್ಲಿ ಜರುಗಲಿದೆ.
ಕದ್ರಿ ಉದ್ಯಾನವನದಲ್ಲಿ ವಾಕಿಂಗ್ ನಿರತರು ಮತದಾನದ ಮಹತ್ವದ ಬಗ್ಗೆ ಮುಕ್ತವಾಗಿ ಮಾತನಾಡಲಿರುವರು. ಜೊತೆಗೆ ಗಣ್ಯರು, ಶಿಕ್ಷಣ, ಸಾಂಸ್ಕøತಿಕ, ಸಾಹಿತ್ಯ, ಕ್ರೀಡೆ, ಸಿನಿಮಾ, ಸ್ವಾತಂತ್ರ್ಯ ಯೋಧರು, ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಬ್ರಿಗೇಡಿಯರ್ ಐ.ಎನ್.ರೈ ಉದ್ಘಾಟಿಸಲಿದ್ದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ.ಸೆಲ್ವಮಣಿ ಆರ್, ರೋಟರ್ಯಾಕ್ಟ್‍ನ ಅಧ್ಯಕ್ಷ ಗಣೇಶ್, ಸಿನಿಮಾ ರಂಗದ ದೇವದಾಸ್ ಕಾಪಿಕಾಡ್, ಕಲಾವಿದೆ ಶಬರಿ ಗಾಣಿಗ, ಎಕ್ಸ್‍ಪರ್ಟ್‍ನ ನರೇಂದ್ರ ನಾಯಕ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಿಎ ಶಾಂತಾರಾಮ ಶೆಟ್ಟಿ, ರೇಡಿಯೋ ಕೇಳುಗರ ಸಂಘದ ರಾಮರಾವ್, ಪತ್ರಿಕಾಭವನದ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಸಾಹಿತಿ ಮನೋರಮಾ ಭಟ್, ಕ್ರೀಡಾಳು ಪ್ರದೀಪ್ ಆಚಾರ್ಯ, ಡಾ.ಪ್ರತಿಭಾ ರೈ, ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯನಿರ್ವಾಹಕರಾದ ಯತೀಶ್ ಬೈಕಂಪಾಡಿ, ಆಕಾಶವಾಣಿಯ ಉಪ ನಿರ್ದೇಶಕರು(ತಾಂತ್ರಿಕ) ರಮೇಶ್ಚಂದ್ರನ್.ಜಿ, ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ, ಮಂಗಳಾ ಮ್ಯಾಜಿಕ್ ಸರ್ಕ್‍ಲ್‍ನ ಸ್ವರ್ಣಸುಂದರ್, ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಾಪತಿ, ವಾರ್ತಾಧಿಕಾರಿ ರೋಹಿಣಿ ಕೆ. ಸ್ವೀಪ್‍ನ ಸದಸ್ಯ ಕಾರ್ಯದರ್ಶಿ ಸುಧಾಕರ್ ಕೆ. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ದ.ಕ.ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಶೆಟ್ಟಿ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಚಂಚಲಾ ತೇಜೋಮಯ ಮತ್ತಿತರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿ ಕೇಂದ್ರವು ನೇರಪ್ರಸಾರ ಮಾಡಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ.