ಬಂಟ್ವಾಳ : ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ತುಂಬೆಯಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್ ರವರ ಉಪಸ್ಥಿತಿಯಲ್ಲಿ ಪಾದುಕಾನ್ಯಾಸ ಕಾರ್ಯಕ್ರಮವು ಜರಗಿತು.

 ಈ ಸಂದರ್ಭದಲ್ಲಿ ಅರ್ಚಕ ವೆಂಕಟೇಶ್ ಕಾರಂತ್, ಆಡಳಿತ ಮೊಕ್ತೇಸರ ವೆಂಕಪ್ಪ ಅಡಪ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಪ್ರಧಾನ ಕಾರ್ಯದರ್ಶಿ ಜೀವನ್ ಆಳ್ವ ತುಂಬೆಗುತ್ತು, ಪ್ರಮುಖರಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಮಜಿಲಗುತ್ತು ರಾಮ್ ದಾಸ್ ಕೋಟ್ಯಾನ್, ಜಯರಾಮ ಸಾಮಾನಿ, ಶೆಡ್ಡೆ ಮಂಜುನಾಥ ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ನೂಳಿಯಾಲಗುತ್ತು, ಪ್ರಕಾಶ್ ಬಿ.ಶೆಟ್ಟಿ ಶೈಲ ತುಂಬೆ, ಜಗನ್ನಾಥ ಶೆಟ್ಟಿ ತುಂಬೆಗುತ್ತು, ನಾಗೇಶ್ ಶೆಟ್ಟಿ ಪೆರಾರ ಮುಂಡಬೆಟ್ಟು, ಲೋಲಾಕ್ಷ ಶೆಟ್ಟಿ ಮೊಡಂಕಾಪುಗುತ್ತು, ಇಂಜಿನಿಯರ್ ಸಂತೋಷ್ ಕುಮಾತ್ ಕೊಟ್ಟಿಂಜ, ಬಾಲಕೃಷ್ಣ ಶೆಟ್ಟಿ ತುಂಬೆ, ಸೋಮಪ್ಪ ಕೋಟ್ಯಾನ್ ತುಂಬೆ, ಉಮೇಶ್ ಸುವರ್ಣ ತುಂಬೆ, ಗಣೇಶ್ ಸಾಲ್ಯಾನ್ ತುಂಬೆ, ಗೋಪಾಲ್ ಕೃಷ್ಣ ಸುವರ್ಣ ತುಂಬೆ, ಅಶೋಕ್ ಶೆಟ್ಟಿ ತುಂಬೆಗುತ್ತು , ದೇವದಾಸ್ ಶೆಟ್ಟಿ ತುಂಬೆಗುತ್ತು, ಯಶವಂತ ಶೆಟ್ಟಿ ತುಂಬೆಗುತ್ತು, ತಿಮ್ಮಪ್ಪ ಶೆಟ್ಟಿ ತುಂಬೆಗುತ್ತು, ದಯಾನಂದ ಪೂಜಾರಿ ಹೊಸಹಿತ್ತಿಲು, ಮೋನಪ್ಪ ಮಜಿ, ದೇವದಾಸ್ ಪರ್ಲಕ್ಕೆ, ನವೀನ್ ಶೆಟ್ಟಿ ತುಂಬೆಗುತ್ತು ಮತ್ತಿತರರು ಉಪಸ್ಥಿತರಿದ್ದರು.