ಮಂಗಳೂರು : ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ವಿವಿಧ ಆ್ಯಡ್ ಆನ್ ಕೋರ್ಸುಗಳ ಸಮಾರೋಪ ಸಮಾರಂಭ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ವಿವಿಧ ಆ್ಯಡ್ ಆನ್ ಕೋರ್ಸುಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸಿ.ಎ., ಸ್ಪೋಕನ್ 

ಇಂಗ್ಲಿಷ್,ಪೊಟೋಗ್ರಾಫಿ, ನಾಟಕ ತರಬೇತಿ, ಕಸೂತಿ ತರಬೇತಿ, ಫ್ರೆಂಚ್, ಟ್ಯಾಲಿ, ಆಡುಗೆ ಕಲೆ, ಕೌಶಲ್ಯ ತರಬೇತಿ, ಐಪಿಆರ್, ಯೋಗ  ಇತ್ಯಾದಿ ಕೋರ್ಸುಗಳ ಅವಧಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆ್ಯಡ್ ಆನ್ ಕೋರ್ಸುಗಳ ಸಂಪನ್ಮೂಲ ವ್ಯಕ್ತಿಗಳಾದ ವಂ. ಫಾ. ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ,ಮಾರಿ ಡಿಸೋಜಾ, ಹರಿನಾ ರಾವ್,ರಾಜೀವ್ ಶೆಣೈ, ಶ್ರೀಮತಿ ಜಾಸ್ಮಿನ್ ಸೆರಾವೊ,ಡೆನ್ಜಿಲ್ ಡಿಕೋಸ್ತಾ, ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ 

ಪ್ರೊಲೂರ್ದುಸಾಮಿ, ಆ್ಯಡ್ ಆನ್ ಕೋರ್ಸುಗಳ ಸಂಯೋಜನಾಧಿಕಾರಿಯಾಗಿರುವ ಕು. ವಿಲ್ಮಾ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾಗಿರುವ ವಂ. ಫಾ. ಮೈಕಲ್ ಸಾಂತುಮಾಯೋರ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ನಿಶ್ಮಿತಾ ಡಿಸೋಜಾ ವಂದಿಸಿದರು. ಅನಿಶಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.