ತೊಕ್ಕೊಟ್ಟು:ಮೋದಿ ಮತ್ತೊಂದು ಬಾರಿ ಪ್ರಧಾನಿಯಾಗಬೇಕೆಂದು  ಪೂಜಾರಿಯೇ ಹೇಳಿದ್ದಾರೆ

ಮೋದಿ ಸರಕಾರ ಯಾರನ್ನೂ ಕೂಡಾ ತಲೆತಗಿಸಿ ನಡೆಯುವಂತೆ ಮಾಡಿಲ್ಲ: ಕಟೀಲ್ ಸಂ.ಕ. ಸಮಾಚಾರ ಉಳ್ಳಾಲ

ಬಿಜೆಪಿಯು ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಜಿಲ್ಲೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೇಯಲ್ಲಿ ಏಳು ಸ್ಥಾನಗಳನನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೋದಿ ಪ್ರಧಾನಿಯಾದ ಬಳಿಕ ಕಳೇದ ಐದು ವರ್ಷದಲ್ಲಿ ಒಟ್ಟು 153 ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮೋದಿಯ 

ಭ್ರಷ್ಟಾಚಾರರಹಿತ ಆಡಳಿತವನ್ನು ಜನಾರ್ದನ ಪೂಜಾರಿ , ಮುಲಾಯಂಸಿಂಗ್ ನಂತಹ ನಾಯಕರು ಕೂಡಾ ಮೆಚ್ಚಿದ್ದಾರೆ. ಪೂಜಾರಿಯವರು ಮತ್ತೊಂದು ಬಾರಿ ಮೋದಿ ಪ್ರಧಾನಿಯಾಗಬೇಕೆಂದು ಸುದ್ದಿಗೋಷ್ಠೀಯಲ್ಲಿಯೇ ಹೇಳಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ತೊಕ್ಕೊಟ್ಟುವಿನ ಗಟ್ಟಿ ಸಮಾಜಭವನದಲ್ಲಿ ಶನಿವಾರ ನಡೆದ  ಬಿಜೆಪಿಯ ಪೇಜ್ ಪ್ರಮುಖರ ಮತ್ತು ಕಾರ್ಯಕರ್ತ ಸಮಾವೇಶದಲ್ಲಿ ಮಾತನಾಡಿದರು.

ಮೋದಿ ಸರಕಾರ ಯಾರನ್ನೂ ಕೂಡಾ ತಲೆತಗಿಸಿ ನಡೆಯುವಂತೆ ಮಾಡಿಲ್ಲ. ಅವರದ್ದು ಭ್ರಷ್ಟಾಚಾರಹಿತ ಆಡಳಿತವಾದ ಕಾರಣ ಎಲ್ಲರೂ ಅವರ ಪರ ಇದ್ದಾರೆ. ಅವರ ಆಡಳಿತದಿಂದ ಉಗ್ರರ ವಿರುದ್ದ ಯಶಸ್ವಿ ಹೋರಾಟ ನಡೆದಿದೆ. ಒಂದು ವೇಳೆ ಮೋದಿ ಸರಕಾರ ಇಲ್ಲದೇ ಇರುತ್ತಿದ್ದರೆ 

ಆಯುಷ್ಮಾನ್, ಅಡುಗೆ ಭಾಗ್ಯ, ಉಗ್ರರ ವಿರುದ್ಧ ಹೋರಾಟ ಸೇರಿದಂತೆ ಯಾವುದೇ ಜನಪರ ಯೋಜನೆಗಳು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದರು. 2014ರರಲ್ಲಿ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭ ಏಳುಮಂದಿ ಕಾಂಗ್ರೆಸ್ ಶಾಸಕರು ಜಿಲ್ಲೆಯಲಿದ್ದರು. ಈ ಬಾರಿ ಏಳು ಮಂದಿ ಬಿಜೆಪಿ ಶಾಸಕರು 

ಇದ್ದಾರೆ. ಮುಂದಿನ ಹಂತದ ವಿಧಾನ ಸಭಾ ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಖಾದರ್‍ರವರನ್ನು ಮನೆ ಕಳುಹಿಸಿ ಜಿಲ್ಲೆಯ ಎಂಟು ಶಾಸಕ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತೇವೆ ಎಂದರು

ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಳಿನ್ ಕುಮಾರ್ ಅವರು ಕಳೆದ ಬಾರಿ ಒಂದು ಲಕ್ಷೂ ಅಧಿಕ ಮತಗಳ ಅಂತರದಲ್ಲಿ ಗೆದ್ದು ದಾಖಲೆ ಸೃಷ್ಟಿಸಿದ್ದರು. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ವಿಜೇತರಾಗಬೇಕು.ಇದಕ್ಕಾಗಿ ಬೂತು ಸಮಿತಿ, ಬ್ಲಾಕ್ ಸಮಿತಿ ಸದಸ್ಯರು 

ಹಗಲಿರುಳು ಶ್ರಮಿಸಬೇಕಾಗಿದೆ.  ಮೋದಿ ಪ್ರಧಾನಿ ಆದ ಮೇಲೆ ದೇಶದ ಗೌರವ ಕೂಡಾ ಹೆಚ್ಚಾಗಿದೆ. ಕಾಂಗ್ರೆಸ್‍ನ ಟೀಕೆ ಟಿಪ್ಪಣಿಗೆ ಕಿವಗೊಡದೇ ಕೆಲಸ ಮಾಡಬೇಕಾಗಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ ಆದದ್ದು ಮೋದಿ ಪ್ರಧಾನಿಯಾದ ಬಳಿಕ. ಇದು ಅವರ ಮಹತ್ತರ ಸಾಧನೆ. 

ನಳಿನ್‍ವರು ಬಹಳಷ್ಟು ಜನಪರ ಸೇವೆ ಮಾಡಿ ನಂಬರ್ ವನ್ ಸಂಸದರು ಆಗಿದ್ದಾರೆ. ಮುಂದೆಯೂ ಅವರೇ ನಂಬರ್ ವನ್ ಸಂಸದರಾಗಲಿದ್ದಾರೆ ಎಂದರು.

ಮಂಗಳೂರು ವಿದಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ,ನಳಿನ್‍ಕುಮಾರ್ ಕಟೀಲ್ ಎರಡು ಬಾರಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರ ಅಧಿಕಾರವಧಿಯಲ್ಲಿ ಉತ್ತಮ ಕೆಲಸ ಕೂಡಾ ನಿರ್ವಹಿಸಿದ್ದಾರೆ. ಈ ಬಾರಿ ಕೂಡಾ ಅವರ ಪರ ಮತದಾರರು ಇದ್ದಾರೆ. ಈ 

ಬಾರಿ ಮೂರು ಲಕ್ಷೂ ಅಧಿಕ ಮತಗಳ ಅಂತರದಿಂದ ಗೆಲ್ಲಬೇಖು. ಅದಕ್ಕಾಗಿ ಪಕ್ಷದ ಕಾರ್ಯಕರ್ತರ ಸೇವೆ ನಿರಂತರವಾಗಿ ಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಶಕ ಸಂಜೀವ ಮಠಂದೂರು, ಮಾಜಿ ಶಾಸಕ ಮೋನಪ್ಪ ಭಂಡಾರಿ, ಜಯರಾಮಶೆಟ್ಟಿ, ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲ ಕೃಷ್ಣ ಹೇರಳ, ಜಿಲ್ಲಾ ಪ್ರ. ಕಾರ್ಯದರ್ಶಿ ಬೃಜೇಶ್ ಚೌಟ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ 

ಉಳ್ಳಾಲ್, ರಾಧಾಕೃಷ್ಣ ರೈ ಬುಡಿಯಾರ್, ರವಿಶಂಕರ ಮೀಜಾರ್, ಚಂದ್ರಶೇಖರ ಉಚ್ಚಿಲ್, ಸತೀಶ್ ಕುಂಪಲ, ಜಿ.ಪಂ. ಸದಸ್ಯೆ ಧನಲಕ್ಷ್ಮೀಗಟ್ಟಿ, ನವೀನ್ ಪಾದಲ್ಪಾಡಿ, ಬಾಬು ಬಂಗೇರ, ರಾಮಚಂದ್ರಕುಂಪಲ ಮೊದಲಾದವರು ಉಪಸ್ಥಿತರಿದ್ದರು.

ದೇವಪ್ಪ ಗಟ್ಟಿ ಕೊಣಾಜೆ ದೀಪ ಪ್ರಜ್ವಲನೆ ಮಾಡಿದರು. ಮೋಹನ್ ರಾಜ್ ಕೆ.ಆರ್. ಸ್ವಾಗತಿಸಿದರು. ಯಶವಂತ ಅಮೀನ್, ಹರಿಯಪ್ಪ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು.

ಕ್ಯಾಪ್ಶನ್: ತೊಕ್ಕೊಟ್ಟು ಕಾಪಿಕಾಡ್ ಗಟ್ಟಿ ಸಮಾಜಭವನದಲ್ಲಿ ನಡೆದ ಬಿಜೆಪಿ ಪೇಜ್‍ಪ್ರಮುಖರ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.