ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಕಛೇರಿಯಲ್ಲಿ 37 ವರ್ಷಗಳ ಸುದೀರ್ಘ ಸೇವೆಯ ಬಳಿಕ ವಯೋನಿವೃತ್ತಿಗೊಂಡಿರುವ ಪ್ರಥಮ ದರ್ಜೆ ಸಹಾಯಕ ಲೂವಿಸ್ ಡಿ’ಸೋಜರಿಗೆ ಸ್ಟಾಫ್ ಅಸೋಸಿಯೇಶನ್ ವತಿಯಿಂದ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು. ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ, ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ, ಕಛೇರಿ ಸಿಬ್ಬಂದಿ ಜೋನ್ ಮೊಂತೇರೊ, ಸ್ಟಾಫ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರೊ. ಗಣೇಶ್ ಭಟ್, ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ. ಮ್ಯಾಕ್ಸಿಂ ಕಾರ್ಲ್ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಪಿ. ರಾಧಾಕೃಷ್ಣ ನಿವೃತ್ತರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹರ್ಬರ್ಟ್ ನಸೆರತ್ ಉಪಸ್ಥಿತರಿದ್ದರು.
