ಪುತ್ತೂರು: ಸಂಸ್ಕೃತಿ ಎನ್ನುವುದು ಸ್ಥಿರವಾಗಿರುವುದಿಲ್ಲ. ಅದು ಪರಿಸ್ಥಿತಿ, ಸಮಯ, ಪ್ರಭಾವ ಮತ್ತು ಅನುಕರಣೆಗೆ ಒಳಗಾಗಿ ನಿರಂತರ ಬದಲಾವಣೆಗೆ ಸಾಕ್ಷಿಯಾಗುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ನೋರ್ಬರ್ಟ್ ಮಸ್ಕರೇನ್ಹಸ್ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಪದವಿ ಸಮಾಜಕಾರ್ಯ ವಿಭಾಗ, ದಕಜಿಪ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಹಾಗೂ ಅಂಗನವಾಡಿಗಳ ಸಂಯೋಜನೆಯಲ್ಲಿ ಬೆಳ್ಳಿಪ್ಪಾಡಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ‘ನಮ್ಮ ಸಂಸ್ಕೃತಿ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ಹೊಸದಾಗಿ ಬರುವಂತಹ ಹೊಸ ಸಂಸ್ಕøತಿಯ ಒಳಿತು ಕೆಡುಕುಗಳನ್ನು ಪರಿಗಣಿಸಿ, ಸ್ವೀಕರಿಸುವ ಜಾಣ್ಮೆ ನಮ್ಮಲ್ಲಿರಬೇಕು. ಹೆತ್ತವರು ಮಕ್ಕಳ ಮೇಲೆ ತಮ್ಮ ಸಂಸ್ಕøತಿಯನ್ನು ಹೇರುವ ಮನೋಗುಣವನ್ನು ಹೊಂದಿರಬಾರದು. ಮೌಲ್ಯಯುತ ಸಂಸ್ಕøತಿಯನ್ನು ಮಕ್ಕಳು ತಮ್ಮ ಇಚ್ಛಾನುಸಾರ ಸ್ವೀಕರಿಸಿ, ಗೌರವಿಸುವಂತಾಗಬೇಕು ಎಂದರು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ಲಕ್ಷಣ ಗೌಡ ಕಂಬಳದಡ್ಡ ಶುಭ ಹಾರೈಸಿದರು.  ಸಭಾಧ್ಯಕ್ಷತೆ ವಹಿಸಿದ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆ ಮಾತನಾಡಿ, ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗವು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಉದ್ದೇಶದಿಂದ ಹಲವಾರು ರೀತಿಯ ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿ, ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಲಜಾಕ್ಷಿ ಬಾಲಚಂದ್ರ ಗೌಡ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಪೋಷಕರು ಇಲ್ಲಿ ಆಯೋಜಿಸಲಾದ ಅಪೂರ್ವ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಶಾಲಾ ಸಹ ಶಿಕ್ಷಕಿ ಇಂದಿರಾ ಪಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ದೀಪಿಕಾ ಸನಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪಕ ವೃಂದ, ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು, ಬೆಳ್ಳಿಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಮೊದಲಾದವರು ಭಾಗವಹಿಸಿದರು.

ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ಅಬ್ದುಲ್ ಬಾಶಿರ್ ಸ್ವಾಗತಿಸಿದರು. ನಿತೀಶ್ ಕುಮಾರ್ ವಂದಿಸಿದರು. ನಿರಂಜನ್ ಕೆ ಕಾರ್ಯಕ್ರಮ ನಿರೂಪಿಸಿದರು.