ಬೆಳ್ತಂಗಡಿ (ಸೆ.18):- ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಅಮ್ಮನವರ ಕೃಪಾಶೀರ್ವಾದದೊಂದಿಗೆ ದಿನಾಂಕ: 18.09.2020ನೇ ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ಜನಜಾಗೃತಿ ಪ್ರಾದೇಶಿಕ ಕಛೇರಿಯ ಉದ್ಘಾಟನಾ ಕಾರ್ಯಕ್ರಮವು ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಶ್ರೀ ಕ್ಷೇತ್ರ ಧರ್ಮಸ್ಥಳದ ‘ಸುರೇಂದ್ರ ಮ್ಯಾನ್ಷನ್’ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಹೆಚ್. ಮಂಜುನಾಥ್‍ರವರು ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿ ದೀಪ ಬೆಳಗಿಸಿ ಕಛೇರಿಯನ್ನು ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಡಾ| ಎಲ್.ಹೆಚ್. ಮಂಜುನಾಥ್‍ರವರು  "ಜನಜಾಗೃತಿ ಪ್ರಾದೇಶಿಕ ಕಛೇರಿಯ ಮೂಲಕ ಮಾನವೀಯತೆ ತುಂಬುವ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ ಈ ವಿಚಾರಗಳ ಅಧ್ಯಯನ ಮತ್ತು ಸಂಶೋಧನೆ ನಿಟ್ಟಿನಲ್ಲಿಯೂ ಗಮನಹರಿಸಬೇಕೆಂದು ಮಾರ್ಗದರ್ಶನ ನೀಡಿದರು". ಮುಖ್ಯಅತಿಥಿಯಾಗಿ ವಿಧಾನಪರಿಷತ್ ಸದಸ್ಯರಾದ  ಪ್ರತಾಪ್‍ಸಿಂಹ ನಾಯಕ್ ಭಾಗವಹಿಸಿ ಜನಜಾಗೃತಿ ಲೋಗೊವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಪ್ರತಾಪ್‍ಸಿಂಹ ನಾಯಕ್ "ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟದಂಧೆಯ ವಿರುದ್ಧ ಸಾಮಾಜಿಕ ಹೋರಾಟದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವೇದಿಕೆ 3 ದಶಕಗಳಿಂದ ಶ್ರಮಿಸುತ್ತಿದೆ" ಎಂದರು. 

ಹಿರಿಯ ನವಜೀವನ ದಂಪತಿಗಳಾದ ವೇಣೂರು ಬಜಿರೆಯ ಶ್ರೀಮತಿ ಮತ್ತು  ಶ್ರೀಧರ ಹೆಗ್ಡೆ ಇವರು 21 ವರ್ಷದ ಪಾನಮುಕ್ತ ಜೀವನದ ವಾರ್ಷಿಕೋತ್ಸವವನ್ನುಕಛೇರಿಯ ಉದ್ಘಾಟನೆಯ ಅಂಗವಾಗಿ ರಿಬ್ಬನ್ ಕತ್ತರಿಸಿ ಆಚರಿಸಿದರು. ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುತ್ಯಾರು ಇದರ ಆರ್ಚಕರಾದ ಶ್ರೀಧರ್ ಭಟ್‍ರವರು ಗಣಹೋಮ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜನಜಾಗೃತಿ ತಾಲೂಕು ಅಧ್ಯಕ್ಷೆ ಶಾರದಾ ಆರ್.ರೈ, ಮಾಜಿ ರಾಜ್ಯಾಧ್ಯಕ್ಷರಾದ  ದೇವದಾಸ್ ಹೆಬ್ಬಾರ್, ಉದ್ಯಮಿ ರಾಜೀತ್‍ ಜೈನ್, ವಕೀಲರಾದ ರತ್ನವರ್ಮ ಬುಣ್ಣು,  ಡಿ.ಎರಹಿಮಾನ್,  ತಿಮ್ಮಪ್ಪಗೌಡ ಬೆಳಾಲು,  ಕಿಶೋರ್ ಹೆಗ್ಡೆ,  ಪ್ರಭಾಕರ್ ಪೊಸಂದೋಡಿ, ನಿರ್ದೇಶಕರಾದ ಚಂದ್ರಶೇಖರ್ ಮತ್ತು ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಆನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿ, ಪಾೈಸ್ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.