ಮಂಗಳೂರು,(ಜನವರಿ 11):- ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆ ಹುದ್ದೆ: ಕೊಳಂಬೆ ಅಂಗನವಾಡಿ ಕೇಂದ್ರ, ವಳವೂರು ಮಸೀದಿ ಬಳಿ ಅಂಗನವಾಡಿ ಕೇಂದ್ರ, ಜಾರಂದಗುಡ್ಡೆ ಅಂಗನವಾಡಿ ಕೇಂದ್ರ, ಮತ್ತು ಪಲ್ಲಿಪಾಡಿ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇದೆ.
ಸಹಾಯಕಿಯರ ಹುದ್ದೆ: ತೇವುಕಾಡು ಅಂಗನವಾಡಿ ಕೇಂದ್ರ, ಹೊಸ್ಮಾರು ಅಂಗನವಾಡಿ ಕೇಂದ್ರ, ಲೊರೆಟ್ಟೊಪದವು ಅಂಗನವಾಡಿ ಕೇಂದ್ರ, ಕೆಳಗಿನ ವಗ್ಗ ಅಂಗನವಾಡಿ ಕೇಂದ್ರ, ಗೂಡಿನಬಳಿ ಅಂಗನವಾಡಿ ಕೇಂದ್ರ, ತಲಪಾಡಿ ಅಂಗನವಾಡಿ ಕೇಂದ್ರ, ಕೇಶವನಗರ ಅಂಗನವಾಡಿ ಕೇಂದ್ರ, ಮತ್ತು ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇದೆ.
ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಫೆಬ್ರವರಿ 6 ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕೈಕುಂಜೆ, ಬಿ.ಸಿ ರೋಡ್. ದೂ. ಸಂಖ್ಯೆ: 08255-232465 ಸಂಪರ್ಕಿಸಬಹುದು ಎಂದು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.