ಮಂಗಳೂರು,(ಜನವರಿ 13):- ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಐಕಳ ಗ್ರಾಮ ಪಂಚಾಯತ್‍ನ ಏಳಿಂಜೆ ಅಂಗನವಾಡಿ ಕೇಂದ್ರ, ಪಾವೂರು ಗ್ರಾಮ ಪಂಚಾಯತ್‍ನ ಪೋಡಾರ್ ಸೈಟ್ ಅಂಗನವಾಡಿ ಕೇಂದ್ರ, ಉಲ್ಲಾಳ ನಗರಸಭೆ, ವಾರ್ಡ್ ನಂ. 17 ರ ಕಲ್ಲಾಪು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ.
ಪಡುಮಾರ್ನಾಡು ಗ್ರಾಮ ಪಂಚಾಯತ್‍ನ ಮುಗೇರಕಳ ಅಂಗನವಾಡಿ ಕೇಂದ್ರ, ಚೇಳ್ಯಾರು ಗ್ರಾಮ ಪಂಚಾಯತ್‍ನ ಚೇಳ್ಯಾರುಪದವು ಅಂಗನವಾಡಿ ಕೇಂದ್ರ, ಮೂಡುಶೆಡ್ಡೆ ಎದುರುಪದವು ಅಂಗನವಾಡಿ ಕೇಂದ್ರ, ಮುಲ್ಕಿ ನಗರ ಪಂಚಾಯತ್ ವಾರ್ಡ್ ನಂ.17ರ ಚಿತ್ರಾಪು ಅಂಗನವಾಡಿ ಕೇಂದ್ರ, ಪಾವೂರು ಗ್ರಾಮ ಪಂಚಾಯತ್‍ನ ಬದ್ರಿಯಾನಗರ ಅಂಗನವಾಡಿ ಕೇಂದ್ರ, ಹರೇಕಳ ಗ್ರಾಮ ಪಂಚಾಯತ್‍ನ ಖಂಡಿಗೆ ಮೂಲೆ ಅಂಗನವಾಡಿ ಕೇಂದ್ರ, ಕೋಣಾಜೆ ಗ್ರಾಮ ಪಂಚಾಯತ್‍ನ ಕೋಣಾಜೆ ಅಂಗನವಾಡಿ ಕೇಂದ್ರ, ಕೆಮ್ರಾಲ್ ಗ್ರಾಮ ಪಂಚಾಯತ್‍ನ ಹೊಸಕಾಡು ಅಂಗನವಾಡಿ ಕೇಂದ್ರ, ಬಜ್ಪೆ ಗ್ರಾಮ ಪಂಚಾಯತ್‍ನ ಕೊಂಚಾರು ಅಂಗನವಾಡಿ ಕೇಂದ್ರ, ಆಂಬ್ಲಮೊಗರು ಗ್ರಾಮ ಪಂಚಾಯತ್‍ನ ಗಾಂಧಿನಗರ ಅಂಗನವಾಡಿ ಕೇಂದ್ರ, ತೆಂಕಮಿಜಾರು ಗ್ರಾಮ ಪಂಚಾಯತ್‍ನ ತೆಂಕಮಿಜಾರು ಅಂಗನವಾಡಿ ಕೇಂದ್ರ, ಜೋಕಟ್ಟೆ ಗ್ರಾಮ ಪಂಚಾಯತ್‍ನ ಜೋಕಟ್ಟೆ-3 ಅಂಗನವಾಡಿ ಕೇಂದ್ರ, ಮೂಡಬಿದ್ರೆ ಪುರಸಭೆ, ವಾ.ನಂ.6 ರ ಜೈನ್‍ಪೇಟೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆ ಖಾಲಿ ಇದೆ.
ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಫೆಬ್ರವರಿ 6 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರ ಕಟ್ಟಡ, ವಾಮಂಜೂರು- 575028. ದೂ.ಸಂಖ್ಯೆ: 0824-2263199 ಸಂಪರ್ಕಿಸಬಹುದು ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.