ಮಂಗಳೂರು (ಸೆಪ್ಟೆಂಬರ್ 05):- ಕೊೈಲ ಜಾನುವಾರು ಕ್ಷೇತ್ರದ ಹುಲ್ಲುಗಾವಲು ಪ್ರದೇಶವು ಜಾನುವಾರುಗಳ ಮೇವಿಗೆ ಮೀಸಲಾದ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಮೋಜು ಮಸ್ತಿಗೆ ಅವಕಾಶವಿರುವುದಿಲ್ಲ. ಇದು ಪ್ರವಾಸಿ ತಾಣವಾಗಿಲ್ಲ. ಆದ್ದರಿಂದ ಕ್ಷೇತ್ರದ ಅಧಿಕಾರಿ, ಸಿಬ್ಬಂದಿಗಳಿಗೆ ಹೊರತು ಪಡಿಸಿ ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಈ ನಿಷೇಧ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊೈಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.