ಮಂಗಳೂರು ಜೂನ್ 10:- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ರಾಜ್ಯ, ರಾಷ್ಟ್ರೀಯ, ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಎಲ್ಲಾ ಸಾಹಿತಿ ಕಲಾವಿದರು ಗಳನ್ನೂ ಒಗ್ಗೂಡಿಸುವ ಮತ್ತು ಪರಸ್ಪರ ಪರಿಚಯಿಸುವ ಸಲುವಾಗಿ ಬ್ಯಾರಿ ಸಾಹಿತಿ ಕಲಾವಿದರ ಬಗ್ಗೆ ವಿವರವುಳ್ಳ ಕೈಪಿಡಿ ( ಡೈರಿ) ಯನ್ನು ಹೊರತರಲು ನಿರ್ಧರಿಸಿದೆ..
ಅದರಂತೆ ಬ್ಯಾರಿ ಕವಿ, ಸಾಹಿತಿ, ದಫ್, ಮೆಹಂದಿ, ಗಾಯನ, ನಾಟಕ, ಬರ್ಧಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರು ತಮ್ಮ ಸ್ವವಿವರದೊಂದಿಗೆ ಭಾವ ಚಿತ್ರವನ್ನು ಅಂಟಿಸಿ ( ಸಾಧನೆ ಮತ್ತು ವ್ಯಕ್ತಿ ಪರಿಚಯದ ವಿವರಗಳು ಅಗತ್ಯವಿರುವುದಿಲ್ಲ) ಸ್ವಯಂ ಅಥವಾ ಅವರ ಪರವಾಗಿ ಇತರರು ಅಕಾಡೆಮಿಯ ಮೊಬೈಲ್ ಸಂಖ್ಯೆ; 7483946578 ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮಥ್ರ್ಯ ಸೌಧ, 2 ನೆ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ , ಮಿನಿ ವಿಧಾನ ಸೌಧದ ಬಳಿ, ಮಂಗಳೂರು 575001 ಗೆ ವಿವರಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಮೊಬೈಲ್ ಸಂಖ್ಯೆ:7483946578 ಸಂಪರ್ಕಿಸಬಹು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿರುತ್ತಾರೆ.