ಮಂಗಳೂರು (ಜೂನ್ 22):- ಮಾರ್ಚ್ 29 ರಂದು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದ ರವಿಂದ್ರನಾಥ್ ಎಂಬವರನ್ನು ವೆನ್ಲಾಕ್ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡಾದ ಬಳಿಕ ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರವೀಂದ್ರನಾಥ್, ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಗೆಂದು ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವೀಂದ್ರನಾಥ್ ಜೂನ್ 21 ರಂದು ಮೃತಪಟ್ಟಿರುತ್ತಾರೆ.
ಮೃತರ ಚಹರೆ ಇಂತಿವೆ:-ಹೆಸರು-ರವೀoದ್ರನಾಥ್, ಪ್ರಾಯ-59, ಎತ್ತರ-5ಅಡಿ 4 ಇಂಚು, ಕೂದಲು-ಕಪ್ಪು ಬಿಳಿ ಮಿಶ್ರಿತ ಕೆದರಿದ ಕೂದಲು, ಮೈ ಬಣ್ಣ-ಎಣ್ಣೆ ಕಪ್ಪು, ಕೋಲು ಮುಖ, ಸಣಕಲು ಶರೀರ, ದಟ್ಟವಾದ ಕಪ್ಪು ಬಿಳ ಮಿಶ್ರಿತ ಗಡ್ಡ, ಮಾತನಾಡುವ ಭಾಷೆ-ತುಳು, ಕನ್ನಡ.
ಮೃತದೇಹವನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಸಂರಕ್ಷಿಸಿಡಲಾಗಿದೆ. ಮೃತರ ವಾರಿಸುದಾರರ ಪತ್ತೆಯಾದಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08258 236333. ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು ಉತ್ತರ ವಿಭಾಗ ಪಣಂಬೂರು, ದೂರವಾಣಿ ಸಂಖ್ಯೆ 0824-2220526, ಇಮೇಲ್ sdpopanamburmgc@ksp.gov.in, ಮಂಗಳೂರು ನಗರ ಪೊಲೀಸ್ ಆಯುಕ್ತ ಕಚೇರಿ ದೂರವಾಣಿ ಸಂಖ್ಯೆ 0824 2220801 ಇಮೇಲ್ compolmgc@ksp.gov.in, ಮಂಗಳೂರು ನಗರ ನಿಸ್ತಂತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ ೦೮೨೪ ೨೨೨೦೮೦೦ ನ್ನು ಸಂಪರ್ಕಿಸಲು ಮೂಡಬಿದ್ರೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.