ಮಂಗಳೂರು:- "ಅಸ್ಥಿರವಾದ ಈ ಲೋಕದಲ್ಲಿ ಉಸಿರಿನೊಂದಿಗೆ ಹುಟ್ಟಿ ಹೆಸರಿನೊಂದಿಗೆ ದೇಹಾಂತ್ಯವಾಗಬೇಕು, ಈ ನಿಟ್ಟಿನಲ್ಲಿ ಹಿರಿಯ ಹವ್ಯಾಸಿ ಹಿಮ್ಮೇಳವಾದಕರಾದ ಜಯಂತ್ ಕುದ್ಪಾಡಿಯವರು ಕಲಾಕ್ಷೇತ್ರದಲ್ಲಿ ಮಾಡಿದ ಸಾಧನಾ ಸತ್ಕಾರ್ಯದಿಂದ ಶಾಶ್ವತ ಕೀತಿಯನ್ನು ಪಡೆದಿದ್ದಾರೆ. ಪುತ್ರೋತ್ಸವಕ್ಕೆ ಸಂಭ್ರಮಿಸುವ ಪಿತಗತಿಸಿದ ಬಳಿಕ ಅವರಾತ್ಮ ಮಕ್ಕಳು ತಮ್ಮನ್ನು ಸಂಸ್ಮರಿಸಿದಾಗ ಶಾಂತಿಯನ್ನು ಪಡೆಯುತ್ತದೆ" ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ನುಡಿದರು.    ಸಂಸ್ಮರಣ ತಾಳಮದ್ದಳೆ ಆಯೋಜಿಸಿದ ಜಯಂತ್ ಕುದ್ಪಾಡಿ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.  

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತುಳುಭವನದ ಸಿರಿ ಚಾವಡಿಯಲ್ಲಿ  ತುಳು ಯಕ್ಷಗಾನ ತಾಳಮದ್ದಳೆ ‘’ಬೆಂಗ್‍ದ ತಗೆ ತಂಗಡಿ’’ ದಿನಾಂಕ 25.09.2020 ರಂದು ನಡೆಯಿತು.

ಭಾಗವತರಾಗಿ ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಅನಿರುದ್ಧ್ ಭಟ್, ಮದ್ದಲೆಯಲ್ಲಿ ರಾಜೇಶ್ ಕುದ್ಪಾಡಿ , ಜಯಕರ ಪಂಡಿತ್, ಚಕ್ರತಾಳ ರಘುರಾಮ್ ಕಾವೂರು, ಅರ್ಥದಾರಿಗಳಾಗಿ ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್‍ಸಾರ್  ಸುರೇಶ್ ಕೊಲಕಾಡಿ, ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ ಇದ್ದರು.