ಒಂದು ಮರ ತನ್ನ ಅವಯವಗಳನ್ನು ಕಳೆದುಕೊಂಡು ತನ್ನತನುವನ್ನು ಕಳೆದು ಸಾಯುವ ಪರಿಸ್ಥಿತಿ ಬಂದಾಗಲೂ ಈ ಭೂಮಿಯ ಜೀವ ಸಂಕುಲ ಹಾಗೂ ವಿಶೇಷವಾಗಿ ಮನುಜರಿಗೆ ಫಲ ನೀಡುವ ತನ್ನ ಕರ್ತವ್ಯವನ್ನು ಮರೆಯುವುದಿಲ್ಲ. ಆದರೆ ಅದೇ ಮನುಜ ಫಲವನ್ನು ತಿಂದ ಮೇಲೆ ನಿರ್ದಾಕ್ಷಿಣ್ಯವಾಗಿ ಅದೇ ಮರವನ್ನು ಕತ್ತರಿಸಿ ತನ್ನ ಕರ್ತವ್ಯವನ್ನು ಮುಗಿಸುತ್ತಾನೆ. ಇದುವೇ ಮರ ಮತ್ತು ನರನ ನಡುವೆ ಇರುವ ವ್ಯತ್ಯಾಸ. ಮನುಷ್ಯ ತಾನೇ ಶ್ರೇಷ್ಠ ಎಂದು ಬೀಗುತ್ತಾನೆ. ಒಂದು ಮರ ನೂರಾರು ವರುಷ ಬದುಕಿ ಗಾಳಿ, ಬೀಜ, ಹಣ್ಣು ನೀಡುತ್ತಾ ನೆಲದೊಳಗೆ ಅಂತರ್ಜಲ ವನ್ನು ವೃದ್ಧಿಸುತ್ತಾ ಸಕಲ ಜೀವಿಗಳಿಗೂ  ಬದುಕು ನೀಡುತ್ತದೆ. ಅದೇ ಮರ ಸತ್ತ ಮೇಲೂ ಬಾಗಿಲಾಗಿ, ನೇಗಿಲಾ ಗಿ, ಮಂಚವಾಗಿ, ಬೆಂಚಾಗಿ, ಕಪಾಟು, ಸಿಂಹಾಸನ ವಾಗಿ ನೂರಾರು ವರುಷ ಪ್ರಯೋಜನ ವಾಗಿಯೇ ಇರುತ್ತದೆ. ಆದರೆ ಮನುಷ್ಯ ಎಂಬ ಅತೀ ಬುದ್ಧಿವಂತ ಜೀವಂತ ಇದ್ದಾಗಲೂ ಯಾರಿಗೂ ಉಪಕಾರಿಯಾಗದೆ ಸತ್ತ ಮೂರು ಗಂಟೆಯೊಳಗೆ ಹೆಣ ವಾಸನೆ ಬರಲು ಆರಂಭವಾಗುತ್ತದೆ. ಮರ ಶ್ರೇ ಷ್ಠ ವೋ, ನರ ಶ್ರೇಷ್ಠವೋ ಎಂದು ಈ ಪ್ರಕೃತಿ ತೀರ್ಮಾನ ಮಾಡುತ್ತದೆ.