ಕೊಂಕಣಿ ಅಕಾಡೆಮಿಯಿಂದ ಕೊಂಕಣಿ ಭಾಷಾ ಕಲಾವಿದರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಯಾವುದೇ ವಯೋಮಾನದ ಜನರು ಭಾಗವಹಿಸಬಹುದಾಗಿದೆ. ಅಡಿಶನ್ ನಲ್ಲಿ ತೇರ್ಗಡೆ ಹೊಂದಿ ಮುಂದಿನ ಸುತ್ತಿಗೆ ಹೋಗುವ ಸ್ಪರ್ಧಾ ತಂಡಗಳಿಗೆ ಅಕಾಡೆಮಿಯು ವಿಶೇಷ ಪ್ರೋತ್ಸಾಹ ನೀಡಲಿದೆ. ಮಾರ್ಚ 27 ರಂದು ಪ್ರಥಮ ಸುತ್ತು, ಎಪ್ರಿಲ್ 11 ಮತ್ತು 18 ರಂದು ಉಳಿದ ಸುತ್ತುಗಳು ನಡೆಯಲಿದೆ. ವೇದಿಕೆಯಲ್ಲಿ ಒಮ್ಮೆಗೆ 3 ಕಲಾವಿದರಿಗೆ ಅವಕಾಶವಿದ್ದು, ಒಟ್ಟು ಗರಿಷ್ಠ 5 ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ಕಲಾತಂಡಗಳು, ತಮ್ಮ ಕಲಾತಂಡದ ಹೆಸರು ಮತ್ತು ಮಾಹಿತಿ ವಿವರಗಳನ್ನು ದಿನಾಂಕ 10.3.2021ರ ಸಂಜೆ 5.30ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರಪಾಲಿಕೆ ಕಟ್ಟಡ, ಲಾಲ್ಬಾಗ್, ಮಂಗಳೂರು-575003, ಇಲ್ಲಿಗೆ ಅಥವಾ ಮಿಂಚಂಚೆ, Kksa1994@gmail.com ಗೆ ತಲುಪುವಂತೆ ಕಳುಹಿಸಿಕೊಡಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ: 0824-2453167 ಅಥವಾ ಮೊ.ನಂ.9449067081 / 9844277418 ಸಂಪರ್ಕಿಸಬಹುದಾಗಿದೆ.