ಮಂಗಳೂರು:- ರೋಟರಿಯಂತಹ ಸಂಸ್ಥೆಯು ಸಮಾಜದಲ್ಲಿ ಉತ್ತಮ ಕಾರ್ಯ, ಚಟುವಟಿಕೆಗಳನ್ನು ಮಾಡುವುದರ ಮೂಲಕ ಮುಂಚೂಣಿಯಲ್ಲಿದೆ, ರಂಗ ತರಂಗ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿದ್ದಾರೆಂದು, ಮಂಗಳೂರು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಝೋನ್-2,ಆರ್ ಐ.ಜಿಲ್ಲೆ 3181 ವತಿಯಿಂದ ನಡೆದ ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆಯನ್ನು ಉದ್ಘಾಟಿಸಿ ಅಭಿಪ್ರಾಯಪಟ್ಟರು.
ಮಂಗಳೂರು ಕೋಸ್ಟಲ್ ವುಡ್ ನಿರ್ಮಾಪಕ, ನಿರ್ದೇಶಕರಾದ ದೇವ್ ದಾಸ್ ಕಾಪಿಕಾಡ್ ರೋಟರಿಯ ಅವಿನಾಭಾವ ಸಂಭಂದವನ್ನು ವಿವರಿಸಿದರು. ಆರ್.ಐ.ಡಿ 3181,ರ ಝೋನ್ -2ರ ಸಹಾಯಕ ರಾಜ್ಯಪಾಲ ರೊಟೇರಿಯನ್ ಎಮ್.ಪಿ.ಎಚ್.ಎಫ್ ಆನಂದ ಶೆಟ್ಟಿ ಉಪಸ್ಥಿತರಿದ್ದರು.
ರಂಗತರಂಗ ಜಿಲ್ಲಾ ಸಂಸ್ಕೃತಿಕ ಸಮಿತಿಯ ಅಧ್ಯಕ್ಷ ರೊಟೇರಿಯನ್ ಪಿ.ಪಿ ಪಿ.ಎಚ್.ಎಫ್ ರಾಜ್ ಗೋಪಾಲ್ ರೈ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ರಂಗ ತರಂಗ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾದ ರೊಟೇರಿಯನ್ ಎಮ್.ಪಿ.ಎಚ್.ಎಫ್ ಶ್ರೀಕಾಂತ್ ನಾಯಕ್ ಮತ್ತು ಕೆ.ಎಮ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರೊಟೇರಿಯನ್ ಪಿ.ಪಿ ಪ್ರಕಾಶ್ ಚಂದ್ರ ವಂದಿಸಿದರು.