ಮೂಡುಬಿದಿರೆ:- ರವಿವಾರ 27 ಸೆಪ್ಟೆಂಬರ್ 2020 ರಂದು, ಬೆಳಿಗ್ಗೆ 10.00 ರಿಂದ  ಪರಂಪರೆ ಉತ್ಸವ ಆರಂಭಗೊಂಡಿತು. ಬೆಳಿಗ್ಗೆ 9.30 ಕ್ಕೆ  ಭಗವಾನ್ 1008 ಚಂದ್ರ ನಾಥ ಸ್ವಾಮಿ ಶ್ರೀ ಮಠ ದ ಪಾರ್ಶ್ವ ನಾಥ ಸ್ವಾಮಿ ಗೆ ಕ್ಷೀರ ಅಭಿಷೇಕ ನೆರವೇರಿತು. ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ದೀಪ ಬೆಳಗಿಸಿ ಭೈರ ದೇವಿ ಮಂಟಪ ಸಾವಿರ ಕಂಬದ ಬಸದಿ ಯಲ್ಲಿ ಭಾರತೀಯ  ವೈವಿಧ್ಯ ಮಯ ನೃತ್ಯಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೂಡುಬಿದಿರೆ ಪರಮ ಪುನೀತ ಅಧ್ಯಾತ್ಮ ಕೇಂದ್ರ ಸಹಸ್ರಾರು ವರ್ಷಗಳಿಂದ ಇಲ್ಲಿ ಅಧ್ಯಾ ತ್ಮ, ಕೇಂದ್ರ ವಾಗಿ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆ ನಿರಂತರ ಪ್ರೊತ್ಸಹ ನೀಡಿದೆ.

ಅಹಿಂಸೆ ವಿಶ್ವ ಭಾತೃತ್ವ ರಾಷ್ಟ್ರ ಪ್ರೇಮ, ಸಹೋದರ ತೆ ಯ ಸಂದೇಶ ನೀಡುವ ಪ್ರಾಚೀನ ಪರಂಪರತಾಣ ಗಳಿಗೆ ಸರಕಾರ ವಿಶೇಷ ಒತ್ತು ನೀಡಿ ಪ್ರವಾಸಿಗರು ಮೂಲ ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನುಡಿದರು. ಧರ್ಮ ಉತ್ತಮ ಸಂಸ್ಕೃತಿ ಯನ್ನು ಕಲಿಸುತ್ತದೆ, ಈ ನಿಟ್ಟಿನಲ್ಲಿ ಧವಲತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಮೂಡುಬಿದಿರೆ ಜೈನ ಮಠ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸ್ಥಾನೀಯ ಸಂಘಟನೆಗಳ ಸಹಕಾರದಿಂದ ಕಾರ್ಯಕ್ರಮ ಹಮ್ಮಿ ಕೊಂಡಿದೆ ಎಂದು ನುಡಿದರು. 

 ಕೆ ಅಭಯಚಂದ್ರ ಜೈನ್ ಪಟ್ಣ ಶೆಟ್ಟಿ, ಸುದೇಶ್ ಕುಮಾರ್, ದಿನೇಶ್ ಕುಮಾರ್,  ಕೆ ಪಿ ಜಗದೀಶ್, ಅಧಿಕಾರಿ ರಶ್ಮಿತಾ ಯುವರಾಜ್ ಉಪಸ್ಥಿತರಿದ್ದರು. ಶ್ವೇತಾ ವಕೀಲರು ಕಾರ್ಯಕ್ರಮ ನಿರ್ವಹಣೆ ಮಾಡಿದರು  ಖ್ಯಾತಿ, ಪ್ರಮೇಯಿ ಪ್ರಾರ್ಥನೆ ಮಾಡಿದರು. ಸೌಮ್ಯ ವಂದನಾರ್ಪಣೆ ಗೈದರು. ಮಕ್ಕಿಮನೆ ಸುದೇಶ್, ಜಯರಾಜ್ ಕoಬ್ಳಿ ಉಪಸ್ಥಿತರಿದ್ದರು. 

ಬಳಿಕ ಜಗತ್ ಪ್ರಸಿದ್ದ ಸಾವಿರ  ಕಂಬದ ಬಸದಿಯಲ್ಲಿ  ವೈವಿಧ್ಯಮಯ ನೃತ್ಯ ಕಾರ್ಯಕ್ರಮ  ಜೈನ ಕಾಶಿ ಮೂಡುಬಿದಿರೆಯಲ್ಲಿ ಧವಲತ್ರಯ ಜೈನ ಕಾಶಿ ಟ್ರಸ್ಟ್  ಹಾಗೂ ಶ್ರೀ ಜೈನ ಮಠ ಮೂಡುಬಿದಿರೆಯ ಜಂಟಿ ಆಶ್ರಯದಲ್ಲಿ  ಪರಂಪರೆ ಹಾಗೂ ಶಾಸ್ತ್ರೀಯ ನೃತ್ಯ ಕಲಾ  ಪ್ರತಿಭೆಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಭಾರತೀಯ ರಂಗ ಕಲೆಗಳಲ್ಲಿ   ನೃತ್ಯ ಪ್ರಕಾರಗಳಾದ ಭರತ ನಾಟ್ಯ , ಜನ ಪದ, ಯಕ್ಷಗಾನ ಮುಂತಾದ  ನೃತ್ಯ ಸಾದರ ಪಡಿಸಿದರು. ಹೆಸರು ನೋಂದಾಯಿಸಿಕೊoಡ ಪ್ರತಿಭಾನ್ವಿತ ಕಲಾವಿದರಿಂದ  ಬೆಳಿಗ್ಗೆ 10.30 ರಿಂದ 5 ರವರೆಗೆ ಜರುಗಿತು, ಹಾಗೂ  5.30 ರಿಂದ 6.00 ರವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ( ರಿ ) ವತಿಯಿಂದ ವೈವಿಧ್ಯ ಮಯ ಕಾರ್ಯಕ್ರಮ ಜರುಗಿತು. ಸಾರ್ವಜನಿಕರಿಗೆ ಕೋವಿಡ್ 19 ಕಾರಣ  ಬಸದಿಗೆ ಬರದೆ ಮನೆಯಲ್ಲೆ ಕಾರ್ಯಕ್ರಮ ಫೇಸ್ಬುಕ್ ಪೇಜ್ ಮೂಲಕ ವೀಕ್ಷಣೆ ಮಾಡುವ ವ್ಯೆವಸ್ಥೆ ಮಾಡಲಾಗಿತ್ತು. 

ಹೆಸರು ನೊಂದಾವಣೆ ಮಾಡಿ ಭಾಗವಹಿಸುವ ಎಲ್ಲಾ ಹಿರಿ ಕಿರಿ ಕಲಾವಿದರಿಗೆ ಧವಳತ್ರ ಯ ಟ್ರಸ್ಟ್  ಹಾಗೂ ಶ್ರೀ ಜೈನ ಮಠ ವತಿಯಿಂದ  ಪ್ರಶಂಶಾ ಪತ್ರ ನೀಡಿದರು. ಕಾರ್ಯಕ್ರಮ ಫೇಸ್ಬುಕ್  ಲೈವ್ ಮೂಲಕ  ಸ್ಪಿರಿಚುವಲ್  -ಡಿವೋಷನ್  ಪೇಜ್  ಕರ್ನಾಟಕದಲ್ಲಿ ಜೈನ ಧರ್ಮ ಮಕ್ಕಿಮನೆ ಕಲಾ ವ್ರoದ ಪೇಜ್ ನಲ್ಲಿ ಸಾರ್ವಜನಿಕ ರು ತಮ್ಮ ತಮ್ಮ ಮನೆಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ವ್ಯೆವಸ್ಥೆ ಮಾಡಲಾಗಿತ್ತು.  ಸಂಜೆ ಆಳ್ವಾಸ್ ವಿದ್ಯಾ ಪ್ರತಿಷ್ಠಾನದ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎ೦ದು  ಶ್ರೀ ಜೈನ ಮಠ ಮೂಡುಬಿದಿರೆ ವ್ಯೆವಸ್ಥಾಪಕರು,ಸಂಜಯಂಥ ಕುಮಾರ್ ಶೆಟ್ಟಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.