ನೀನು ಬರದೇ ಇದ್ದರೆ

ಸಕಲವೂ ನೆನಪಿನಂಗಳದಲ್ಲಿ ಕಾಡುತ್ತದೆ

ನೀನು ಒಮ್ಮೆ ಬಂದರೆ

ಮನದ  ನೋವು ಮಾಯವಾಗುತ್ತದೆ


ನಿನ್ನ ಅಮಲಿನಲ್ಲಿ ನಿಶ್ಕಲ್ಮಶ

ಮುಗ್ಧ ಮಕ್ಕಳಾಗುವರೆಲ್ಲಾ

ತಾಯ ಒಡಲಿನ ಸುಖ

ನಿನ್ನ ನಂತರ ಬೇರೆಲ್ಲೂ ಇಲ್ಲಾ


ನೀನು ಯಾರಲ್ಲೂ ಎಣಿಸಲ್ಲಾ

ಈ ಹೊಲಸು ಜಾತಿ-ಭೇದ

ಕೋಟ್ಯಾಧಿಪತಿಗೂ ತಟ್ಟೀತೂ

ನೀನಿಲ್ಲದಿದೆ ನರಕದ ಸ್ವಾದ


ನಾನಂತೂ ಆಗುವೆ ದುಃಖಿ

ವೇಳೆಗೆ ನಿನ್ನ ನೋಡದೆ ಇದ್ರೆ

ಸರ್ವರಲ್ಲೂ ಸಂಭ್ರಮಿಸು ನೀ

ತಿಳಿಸೀ ನಿನ್ನ ಹೆಸರು ನಿದ್ರೆ…


- ಮಾಗಿದ ಮನಸ್ಸು