ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು‌ ಒಪ್ಪದ ಸುಪ್ರೀಂ ಕೋರ್ಟ್ ತುರ್ತಾಗಿ ಸಂಬಂಧಿಸಿದ ಮಾಹಿತಿ ತರಿಸಿ ಕರ್ನಾಟಕ ಹೈಕೋರ್ಟ್ ಸೂಚಿಸಿದ್ದ 1,200 ಟನ್ ಆಮ್ಲಜನಕ ಪೂರೈಕೆಯ ಆದೇಶವನ್ನು ಎತ್ತಿ‌ ಹಿಡಿಯಿತು.

ರಾಜ್ಯದ ಕೋವಿಡ್ ಪರಿಸ್ಥಿತಿ ಉಲ್ಭಣಿಸಿರುವುದನ್ನು ಗಮನಿಸಿ ಕರ್ನಾಟಕ ಹೈಕೋರ್ಟ್ ರಾಜ್ಯಕ್ಕೆ ಕೂಡಲೆ ನಿತ್ಯ‌1,200 ಟನ್ ಮೆಡಿಕಲ್ ಆಕ್ಸಿಜನ್ ಪೂರೈಸಲು ಅದೇಶಿಸಿತ್ತು. ಇದನ್ನು ವಿರೋಧಿಸಿ ತಡೆ ಕೋರಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ವಿ. ವೈ. ಚಂದ್ರಚೂಡ್ ಮತ್ತು ಎಂ. ಆರ್. ಶಾ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿಯಿತು. ಇಂದಿನಿಂದಲೇ‌ ಆದೇಶ ಪಾಲಿಸುವಂತೆಯೂ ಸುಪ್ರೀಂ ಕೋರ್ಟ್ ಹೇಳಿದೆ.