ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ಕೋವಿಡ್ ವಾರ್ ರೂಮಿಗೆ ಭೇಟಿ ನೀಡಿ ಕ್ಷಮೆ ಯಾಚಿಸಿದರು.
ಬಿಬಿಎಂಪಿ ದಕ್ಷಿಣ ವಲಯ ಕೋವಿಡ್ ವಾರ್ ರೂಮಿನಲ್ಲಿ ಬೆಡ್ ಬ್ಲಾಕ್ ಮಾರ್ಕೆಟ್ ನಡೆದಿದೆ ಎಂದು ಆಪಾದನೆ ಮಾಡಿದ ತೇಜಸ್ವಿ ಸೂರ್ಯ ಅದಕ್ಕೆ 17 ಜನ ಮುಸ್ಲಿಂ ನೌಕರರು ಕಾರಣ ಎಂದು ಕೋಮು ಭಾವನೆ ಕೆರಳಿಸಿದ್ದರು. ವಿಚಿತ್ರವೆಂದರೆ ಅವರು ಕೆಲವು ಮುಸ್ಲಿಮರ ಹೆಸರುಗಳನ್ನೂ ಹೇಳಿದ್ದರು.
ಸತ್ಯವೇನೆಂದರೆ ಬಿಬಿಎಂಪಿ ದಕ್ಷಿಣ ವಲಯ ಕೋವಿಡ್ ವಾರ್ ರೂಮಿನಲ್ಲಿ ಕೆಲಸ ಮಾಡುವ 200 ಜನರಲ್ಲಿ ಒಬ್ಬರು ಮಾತ್ರ ಮುಸ್ಲಿಂ ಇದ್ದರು. ಸತ್ಯ ಹೊರಬಂದ ಮೇಲೆ ಸಂಸದರಿಗೆ ಮುಖ ಇರಲಿಲ್ಲ. ಕೊನೆಗೆ ವಾರ್ ರೂಮಿಗೆ ಬಂದು ಶುಕ್ರವಾರ ಬೆಳಿಗ್ಗೆ ಕ್ಷಮೆ ಕೋರಿದರು.