ಚುನಾವಣೆ ಮುಗಿದ ಬೆನ್ನಿಗೆ ಹಿಂಸಾಚಾರಕ್ಕೆ ಇಳಿದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೇಳುತ್ತಿರುವ ಬಿಜೆಪಿ ನಡೆಸಿರುವ ಕರಾಮತ್ತೇನು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ.

ಇಲ್ಲಿಯವರೆಗೆ ಹಿಂಸಾಚಾರದಿಂದ‌ 17 ಜನ ಸತ್ತಿದ್ದಾರೆ. ಅದರಲ್ಲಿ ಎಂಟು ಜನ ಟಿಎಂಸಿಯವರು, ಒಂಬತ್ತು ಜನ ಬಿಜೆಪಿಯವರು ಎನ್ನಲಾಗಿದೆ. ಕಿಚ್ಚು ಹಚ್ಚಿದವರು ಹಿಂದೆ ಆರಾಮವಾಗಿ ಇದ್ದಾರೆ. ಶಾಂತಿ ಪಾಲನೆ ಬರೇ ರಾಜ್ಯ ಸರಕಾರದ ಜವಾಬ್ದಾರಿಯಲ್ಲ. ಅದು ಕೇಂದ್ರ ಸರಕಾರದ ಜೊತೆಗಿನ ಜಂಟಿ ಜವಾಬ್ದಾರಿ ಆಗಿದೆ ಎಂದು ಸಾಮ್ನಾ ಹೇಳಿದೆ.

ಚುನಾವಣಾ ಕಾಲದಲ್ಲಿ ಪಡುವಣ ಬಂಗಾಳದಿಂದ ಕಾಲು‌ ಕೀಳದ ಪ್ರಧಾನಿ ಈಗ ‌ಫೋನಿನಲ್ಲೇ ಮಾಹಿತಿ ಕೇಳುವುದೇಕೆ? ಇದರ ಹಿಂದೆ ಬಿಜೆಪಿಯ ದೊಡ್ಡ ಮೋಸ ಇರುವುದಾಗಿ ಶಿವಸೇನೆ ಪ್ರತಿಪಾದಿಸಿದೆ.