ತಮಿಳುನಾಡಿನಲ್ಲಿ ಅಧಿಕಾರ ವಹಿಸಿಕೊಂಡ ಬೆನ್ನಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದುದರ ಜಾರಿಗೆ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಹಿ ಹಾಕಿದರು.

ನೋವೆಲ್ ಕೋವಿಡ್19 ಕಾಲದ ಪರಿಹಾರವಾಗಿ 2,07,67,000 ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಲಾ ರೂ. 2,000 ನೀಡುವ 4,513 ಕೋಟಿ ರೂಪಾಯಿ ಯೋಜನೆಗೆ ಮುಖ್ಯಮಂತ್ರಿ ‌ಸಹಿ ಮಾಡಿದರು.

ತಮಿಳುನಾಡಿನ ಡೈರಿ ಆವಿನ್ ಹಾಲಿನ‌ ಬೆಲೆಯನ್ನು ಭಾನುವಾರದಿಂದ ಜಾರಿಗೆ ಬರುವಂತೆ ಇಳಿಸಿದ್ದಾರೆ. ಬೇರೆ ಬೇರೆ ಹಾಲಿನ ಬೆಲೆ ಬೇರೆ ಬೇರೆ ಇದೆ.

ನಗರ ಸಂಚಾರ ಸಾರಿಗೆ ವ್ಯವಸ್ಥೆ ಇರುವ ಎಲ್ಲ ನಗರ ಪ್ರದೇಶದ ಮಹಿಳೆಯರು ಶನಿವಾರದಿಂದ ನಗರ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇದಕ್ಕೆ ರೂ. 1,200 ಕೋಟಿ ಅನುದಾನವನ್ನು ಕೊಡಮಾಡುವದಕ್ಕೂ ಮುಖ್ಯಮಂತ್ರಿ ಇಂದು ಸಹಿ‌ ಹಾಕಿದ್ದಾರೆ.