ಮರಿಯಪೋಲ್‌ನಲ್ಲಿ ಮುರಿದ ಕಟ್ಟಡ ತೆರವುಗೊಳಿಸುವಾಗ ನೆಲಮಾಳಿಗೆಯೊಂದರಲ್ಲಿ 200 ಪೂರ್ಣ ಕೊಳೆತ ಶವಗಳು ಪತ್ತೆಯಾಗಿವೆ. ಹೂಳಲು ಮರೆತ ಯುದ್ಧ ಸಾವಿನ ಶವಗಳಿವು ಎನ್ನಲಾಗಿದೆ.

4.5 ಲಕ್ಷ ಜನಸಂಖ್ಯೆ ಇದ್ದ ಮರಿಯಪೋಲ್‌ನಲ್ಲಿ ರಶಿಯಾ ದಾಳಿಯ ಬಳಿಕ ಎಲ್ಲ ವಲಸೆ ಹೋಗಿ 1 ಲಕ್ಷದಷ್ಟು ಜನರು ಮಾತ್ರ ಉಳಿದಿದ್ದಾರೆ. 23,000 ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. 

ದೋನ್ಬಾಸ್ ಪ್ರದೇಶವನ್ನು ರಶಿಯಾ ಪರ ಬಂಡುಕೋರರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಉಕ್ರೇನ್ ಒಪ್ಪಿಕೊಂಡಿದೆ.