ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018, 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯರನ್ನು ಆಯ್ಕೆ ಮಾಡಲಾಗಿದೆ. 2018ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದಲ್ಲಿ ಲಲಿತಾ ಆರ್. ರೈ, ತುಳು ನಾಟಕ ಕ್ಷೇತ್ರದಲ್ಲಿ ರತ್ನಾಕರ ರಾವ್ ಕಾವೂರು ಮತ್ತು ತುಳು ಸಿನಿಮಾ ಕ್ಷೇತ್ರದಲ್ಲಿ ಎ. ಕೆ ವಿಜಯ್ (ಕೋಕಿಲಾ).
2019ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಸ್. ಆರ್. ವಿಘ್ನರಾಜ್, ತುಳು ಯಕ್ಷಗಾನ ಕ್ಷೇತ್ರ (ಮರಣೋತ್ತರ) ದಿ| ತಿಮ್ಮಪ್ಪ ಗುಜರನ್ ತಲಕಳ, ತುಳು ಜಾನಪದ ಕ್ಷೇತ್ರ ಶ್ರೀ ಗುರುವ ಕೊರಗ, ಹಿರಿಯಡ್ಕ.
2020ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರ ರಾಮಚಂದರ್ ಬೈಕಂಪಾಡಿ, ತುಳು ನಾಟಕ ಕ್ಷೇತ್ರ ತುಂಗಪ್ಪ ಬಂಗೇರ ಪೂಂಜಾಲಕಟ್ಟೆ, ತುಳು ಜಾನಪದ ಕ್ಷೇತ್ರ ಆನಂದ ಪೂಜಾರಿ, ಹಳೆಯಂಗಡಿ. ಅವರನ್ನು ಆಯಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಜೀವಮಾನದ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ವಿಭಾಗಗಳ ತಲಾ ಒಂದು ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ. ಕವನ ಸಂಕಲನ ವಿಭಾಗದಲ್ಲಿ ಶ್ರೀ ಶಾಂತಾರಾಮ್ ವಿ. ಶೆಟ್ಟಿರವರ ‘ಮಣ್ಣ ಬಾಜನೊ’ ಹಾಗೂ ಕಾದಂಬರಿ ವಿಭಾಗದಲ್ಲಿ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲರವರ ‘ಕೊಂಬು’ ಕೃತಿಯನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಕವನ ಸಂಕಲನ ವಿಭಾಗದಲ್ಲಿ ಕುಶಾಲಾಕ್ಷಿ ವಿ. ಕುಲಾಲ್, ಕಣ್ವತೀರ್ಥರವರ ‘ಪನಿ ಮುತ್ತು ಮಾಲೆ’ ಕೃತಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಕವನ ಸಂಕಲನ ವಿಭಾಗದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ರವರ ‘ಕೆಲೆಪು ಪೆರಡೆ ಕೆಲೆಪು’ ಕೃತಿಯನ್ನು ಆಯ್ಕೆ ಮಾಡಲಾಗಿದೆ.
ಮಾರ್ಚ್ 7ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018, 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ವಿವಿಧ ಸಾಂಸ್ಕøತಿಕ ಮತ್ತು ವಿಚಾರಗೋಷ್ಠಿಯ ಮೂಲಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 7ರ ಆದಿತ್ಯವಾರದಂದು ಪೂರ್ವಾಹ್ನ 9.30 ರಿಂದ ರಾತ್ರಿ 8.00 ರವರೆಗೆ ನಡೆಯಲಿದೆ.
2018, 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿಯು ರೂ.50,000/- ನಗದು, ಪ್ರಶಸ್ತಿ ಪತ್ರ, ಸ್ಮರಣೆಕೆ ಹಾಗೂ ಪುಸ್ತಕ ಬಹುಮಾನಕ್ಕೆ ರೂ.25,000/- ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 07 ರಂದು ಆದಿತ್ಯವಾರ ‘ರವೀಂದ್ರ ಕಲಾಕ್ಷೇತ್ರ’ ಬೆಂಗಳೂರಿನಲ್ಲಿ ಜರಗಲಿದೆ.